ಬೆಳಗಾವಿ: ಇಲ್ಲಿನ ಕೆಎಲ್ಎಸ್ (ಕರ್ನಾಟಕ ಕಾನೂನು ಸೊಸೈಟಿ) ಸಂಸ್ಥೆಯ ಅಮೃತ ಮಹೋತ್ಸವವನ್ನು ಸೆ. 15ರಂದು ಬೆಳಿಗ್ಗೆ 11.30ಕ್ಕೆ ಉದ್ಯಮಬಾಗದ ಜಿಐಟಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಪತ್ನಿ ಸವಿತಾ ಸಮೇತ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ತಿಳಿಸಿದರು.

ಮಾಧ್ಯಮ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರಪತಿ ಒಂದು ಗಂಟೆ ಸಮಯ ನೀಡಿದ್ದಾರೆ. ಸಮಾರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

ಸದಸ್ಯ ಆರ್.ಎಸ್. ಮುತಾಲಿಕ ದೇಸಾಯಿ ಮಾತನಾಡಿ, ‘800 ಮಂದಿಗೆ ವಿಐಪಿ ಪಾಸ್ ವಿತರಿಸಲಾಗಿದೆ. ವಕೀಲರ ಸಂಘದ ಸದಸ್ಯರನ್ನೂ ಆಹ್ವಾನಿಸಲಾಗಿದೆ. ಬರುವವರು ಮೊಬೈಲ್, ನೀರಿನ ಬಾಟಲಿ ತರುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ಜಿಐಟಿ ಕಾಲೇಜು ಕ್ರೀಡಾಂಗಣದ ಹಿಂದಿನ ದ್ವಾರದಿಂದ ಪ್ರವೇಶ ನೀಡಲಾಗುವುದು’ ಎಂದು ವಿವರಿಸಿದರು.

‘ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಭಾಗವಹಿಸುವರು. ಕೆಎಲ್ಎಸ್ ಅಧ್ಯಕ್ಷ ಅನಂತ ಮಂಡಗಿ ಅಧ್ಯಕ್ಷತೆ ವಹಿಸುವರು’ ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ಎ.ಕೆ. ತಗಾರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.