ಬೆಳಗಾವಿ: ‘ಗಣಿತ ವಿಜ್ಞಾನ ಎಲ್ಲ ವಿಜ್ಞಾನಗಳಿಗೂ ತಾಯಿ ಇದ್ದಂತೆ. ಗಣಿತವಿಲ್ಲದೆ ಯಾವುದೇ ಕ್ಷೇತ್ರವೂ ನಡೆಯಲು ಸಾಧ್ಯವಿಲ್ಲ ಮತ್ತು ಮನುಷ್ಯನ ಬದುಕು ಸಾಗುವುದಿಲ್ಲ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಶ್ರೀನಿವಾಸ ರಾಮಾನುಜನ್ ಅವರ 133ನೇ ಜನ್ಮದಿನೋತ್ಸವ ಅಂಗವಾಗಿ ಗಣಿತ ವಿಭಾಗದಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗಣಿತ ವಿಷಯವು ಕಠಿಣವಾಗಿದ್ದರೂ ಅದನ್ನು ನಿಷ್ಠೆಯಿಂದ ಅಧ್ಯಯನ ಮಾಡಿದರೆ ಅದರಿಂದ ಬಹಳಷ್ಟು ಅನುಕೂಲವಿದೆ’ ಎಂದರು.

‘ಗಣಿತವಿಲ್ಲದೆ ಯಾವ ದೇಶದ ಪಂಚಾಂಗವನ್ನೂ ತಯಾರಿಸಲಾಗುವುದಿಲ್ಲ’ ಎಂದು ಹೇಳಿದರು.

ಬೆಂಗಳೂರು ಸಿಟಿ ಸೆಂಟ್ರಲ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹಾದೇವ ನಾಯಕ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಂ. ಜಯಪ್ಪ ಮಾತನಾಡಿದರು.

ಸುಕನ್ಯಾ ಪ್ರಾರ್ಥನಾ ಗೀತೆ ಹಾಡಿದರು. ಡಾ.ಸುನೀಲ ಹೊಸಮನಿ ಸ್ವಾಗತಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಆದಿನಾಥ ಉಪಾಧ್ಯಾಯ ಪರಿಚಯಿಸಿದರು. ಡಾ.ಕವಿತಾ ಕುಸುಗಲ್ಲ ನಿರೂಪಿಸಿದರು. ಸಂತೋಷ ಕಠಾವೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.