ಕಾಗವಾಡ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷ್ಣಾನದಿ ಹಾಗೂ ಬಾವಿಗಳಲ್ಲಿ ಅಳವಡಿಸಿದ್ದ ನೀರೆತ್ತುವ ಪಂಪ್‌ಸೆಟ್, ಮೋಟಾರುಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ
ಮೂವರು ಆರೋಪಿಗಳನ್ನು ಸ್ಥಳೀಯ ಪೋಲಿಸರು ಸೋಮವಾರ ಬಂಧಿಸಿದ್ದಾರೆ.

ಯೋಗೇಶ ಕರೋಲಿ, ಸತೀಶ್ ಸೂರ್ಯವಂಶಿ, ವಿಜಯ ಬಿಷೆ ಬಂಧಿತರು. ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಡಾ.ಸಂಜೀವ್ ಪಾಟೀಲ, ‘ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಕಾಗವಾಡ ಪಿಎಸ್ಐ ಎಚ್.ಕೆ. ನರಳೆ ನೇತೃತ್ವದ ಒಂದು ವರ್ಷ ಕಾರ್ಯಾಚರಣೆ ನಡೆಸಿ, ಮೂವರು ಅಂತರರಾಜ್ಯ ಕಳ್ಳರನ್ನು ಬಂಧಿಸಿದೆ. ಅವರಿಂದ ₹7 ಲಕ್ಷ ಮೌಲ್ಯದ 36 ಪಂಪ್‌ಸೆಟ್, ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ’ ಎಂದರು.

ಪ್ರಕರಣ ಭೇದಿಸಿದ ತಂಡಕ್ಕೆ ₹10 ಸಾವಿರ ನಗದು ಬಹುಮಾನ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.