ಯೇಸು ಈ ಭೂಮಿ ಮೇಲೆ ಹುಟ್ಟಿ 21 ಶತಮಾನಗಳು ಕಳೆದು ಹೋದವು. ಆದರೂ ಜಗತ್ತಿನ ಉದ್ಧಾರಕ್ಕಾಗಿ ಅವರು ನೀಡಿದ ಸಂದೇಶಗಳನ್ನು ಪರಿಣಾಮಕಾರಿಯಾಗಿ ಅನುಸರಿಸಲು ಆಗಿಲ್ಲ. ಪರಸ್ಪರ ಪ್ರೀತಿ, ಗೌರವ ಹಾಗೂ ಸಹಾಯ ಮಾಡಿದರೆ ಸಾಕು; ಜಗತ್ತು ಕಲ್ಯಾಣವಾಗುತ್ತದೆ.

ಯೇಸು ಅರಮನೆಯಲ್ಲಿ ಹುಟ್ಟಲಿಲ್ಲ. ಸಣ್ಣ ಊರಿನಲ್ಲಿ ಗೋದಲಿಯಲ್ಲಿ ಜನ್ಮತಳೆದರು. ಬೆತ್ಲಹೇಮ್‌ನಲ್ಲಿ ಆ ಕಾಲದ ದಿನಗಳು ಮಾನವರಿಗೆ ಕಠಿಣವಾಗಿದ್ದವು. ಅವರ ನೋವು ಮರೆಸಿ, ಶಾಂತಿ ನೀಡಲು ಯೇಸು ಜನಿಸಿದರು.

ಜೀಸಸ್ ಈ ಜಗತ್ತಿಗೆ ಬಂದಿದ್ದು ಮನುಷ್ಯರನ್ನು ಪಾಪಗಳಿಂದ ಬಿಡುಗಡೆ ಮಾಡಲು. ಸಹಜೀವಿಗಳಿಗೆ ಸಂಕಟ ತಂದೊಡ್ಡುವುದೇ ಆಧುನಿಕ ಪ್ರಪಂಚದ ದೊಡ್ಡ ಪಾಪವಾಗಿದೆ. ಇದು ಸಂಕಟ ತಂದೊಡ್ಡುವ ಕಾಲವಲ್ಲ; ಕಾಳಜಿ ವಹಿಸುವ ಕಾಲ. ಆ ಕಾಳಜಿ ಗುಣವನ್ನೇ ನಾವು ಯುವಪೀಳಿಗೆಗೆ ಧಾರೆ ಎರೆಯೋಣ.

ಬಿಷಪ್ ರೆವರೆಂಡ್ ಡಾ.ಡೆರೆಕ್ ಫರ್ನಾಂಡಿಸ್, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.