ಬೆಂಗಳೂರು: ಬಾಂಗ್ಲಾದೇಶ ಹಾಗೂ ಹೊರರಾಜ್ಯದ ಮಹಿಳೆಯರನ್ನು ಕಳ್ಳಸಾಗಣೆ ಮೂಲಕ ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದ 14 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

20 ಮಹಿಳೆಯರನ್ನು ರಕ್ಷಿಸಿದ್ದಾರೆ. ವಿಶೇಷ ಕಾರ್ಯಾಚರಣೆ ವೇಳೆ ಮಾನವ ಕಳ್ಳಸಾಗಣೆ ಜಾಲ ಪತ್ತೆಯಾಗಿದೆ.

‘ಅಕ್ಟೋಬರ್ 1ರಿಂದ 30ರ ತನಕ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆದಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ತಿಳಿಸಿದರು.

ಬಾಂಗ್ಲಾದೇಶದ 4, ಪಶ್ಚಿಮ ಬಂಗಾಳದ 11, ತೆಲಂಗಾಣ ಹಾಗೂ ಉತ್ತರಾಖಂಡದ ತಲಾ ಒಬ್ಬರು ಹಾಗೂ ಕರ್ನಾಟಕದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ. ಆರೋಪಿಗಳ ವಿರುದ್ಧ ಬಾಗಲಗುಂಟೆ, ವರ್ತೂರು, ವಿದ್ಯಾರಣ್ಯಪುರ, ಅಮೃತಹಳ್ಳಿ, ಕೆ.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಲಾಗಿದೆ.

ಆರೋಪಿಗಳಿಂದ ನಾಲ್ಕು ಬೈಕ್, ಒಂದು ಕಾರು, 40 ಮೊಬೈಲ್, ಎರಡು ಲ್ಯಾಪ್ಟಾಪ್ ಹಾಗೂ ಮೂರು ವಿವಿಧ ಕಂಪನಿಗಳ ಮೂರು ಸಿಮ್ ಕಾರ್ಡ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

‘ಮಾನವ ಕಳ್ಳಸಾಗಣೆಯ ಮಾಹಿತಿ ಬಂದಿತ್ತು. ಪ್ರಕರಣ ಭೇದಿಸಲು ಬೆಂಗಳೂರು ನಗರ, ಕೇಂದ್ರ ಅಪರಾಧ ವಿಭಾಗ ಹಾಗೂ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು’ ಎಂದು ಕಮಿಷನರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.