ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಅಕ್ರಮವಾಗಿ ಮಾಡಿಕೊಟ್ಟಿರುವ ‘ಎ’ ಖಾತಾಗಳು ರದ್ದಾಗಲಿವೆ. ಈಗ ಎಲ್ಲವನ್ನೂ ‘ಬಿ’ ಖಾತಾಗೆ ವರ್ಗಾಯಿಸಲು ನಿರ್ಧರಿಸಲಾಗಿದೆ.

ಬಿ ಖಾತಾಗೆ ಅರ್ಹವಾಗಿರುವ ಆಸ್ತಿಗಳಿಗೆ ಅಕ್ರಮವಾಗಿ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು, ‘ಐಎಫ್ಎಂಎಸ್’ ತಂತ್ರಾಂಶದ ‘ಆರ್ ಕೋಡ್ 130’ ಬಳಸಿ ‘ಎ’ ಖಾತಾ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ. 2015ರಿಂದ 2023ರವರೆಗೆ ಒಟ್ಟು 45,133 ಪ್ರಕರಣಗಳಲ್ಲಿ ₹898.70 ಕೋಟಿ ಪಾವತಿಸಿಕೊಳ್ಳಲಾಗಿದೆ. ಇವುಗಳಲ್ಲಿ ಶೇ 90ರಷ್ಟು ಪ್ರಕರಣಗಳು ಅಕ್ರಮ ಎಂದು ಪರಿಗಣಿಸಲಾಗಿದೆ.

ಅಕ್ರಮವಾಗಿ ‘ಎ’ ಖಾತಾ ನೀಡಿರುವ ಆಸ್ತಿಗಳ ಮಾಹಿತಿ ಒದಗಿಸಲು ಸಹಾಯಕ ಕಂದಾಯ ಅಧಿಕಾರಿಗಳಿಗೆ (ಎಆರ್ಒ) ಅವಕಾಶ ನೀಡಲಾಗಿತ್ತು. ಅವರು 9,736 ಆಸ್ತಿಗಳ ಮಾಹಿತಿ ನೀಡಿದ್ದರು. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯಪುರ ಅವರ ನೇತೃತ್ವದ ತಂಡ ‘ಬ್ಯಾಕ್ಹ್ಯಾಂಡ್ ಸಾಫ್ಟ್ವೇರ್ ಇನ್ವೆಸ್ಟಿಗೇಷನ್’ ನಡೆಸಿದ್ದರಿಂದ, 40 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಅಕ್ರಮವಾಗಿ ಖಾತಾ ನೀಡಿರುವುದು ಗೊತ್ತಾಗಿದೆ.

ಸರ್ಕಾರದ ಆದೇಶದ ಪ್ರಕಾರ, ಕೊಳೆಗೇರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಹಕ್ಕು ಪತ್ರ ನೀಡಲಾಗಿದೆ. ಅಂತಹ ಆಸ್ತಿಗಳಿಗೆ ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಎ ಖಾತಾ ನೀಡಲು ಆರ್ ಕೋಡ್– 130 ಬಳಸಲಾಗುತ್ತದೆ. ಆದರೆ, ಎಆರ್ಒಗಳು ಇದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಎಲ್ಲ ಅಕ್ರಮ ಎ ಖಾತೆಗಳನ್ನು ಬಿ ವಹಿಗೆ ಸೇರಿಸಲು ಕಂದಾಯ ವಿಭಾಗದ ಅಧಿಕಾರಿಗಳ ತಂಡ ರಚನೆ ಮಾಡಿ, ಕೂಡಲೇ ಕ್ರಮ ಕೈಗೊಳ್ಳಲು ವಲಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಜಯರಾಂ ರಾಯಪುರ ತಿಳಿಸಿದರು.

ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳಲು ಬರುವುದಿಲ್ಲ. ಅಂತಹ ಆಸ್ತಿಗಳೆಲ್ಲವೂ ಬಿ ಖಾತಾ ಅಥವಾ ವಹಿಯಲ್ಲಿ ದಾಖಲಾಗಿರುತ್ತವೆ. ಇಂತಹ ಪ್ರಕರಣಗಳಲ್ಲಿ ಎ ಖಾತಾ ನೀಡಿ ಅಕ್ರಮ ಎಸಗಲಾಗಿದೆ. ಅಂತಹ ಎಲ್ಲ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಒಂದು ಲಕ್ಷ ಪ್ರಕರಣ: ತಂತ್ರಾಂಶದಿಂದ ಪರಿಶೀಲನೆ ನಡೆಸಿದಾಗ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳ ಅಕ್ರಮ ಗೊತ್ತಾಗಿದೆ. ಇನ್ನು, 9 ಸಾವಿರ ಪ್ರಕರಣಗಳ ಬಗ್ಗೆ ಎಆರ್ಒಗಳೇ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಪುಸ್ತಕದಲ್ಲಿ ‘ಎ’ ಖಾತೆ ಎಂದು ಅಕ್ರಮವಾಗಿ ಬದಲಾಯಿಸಿ, ಹಣ ಪಡೆದಿರುವ ಪ್ರಕರಣಗಳೂ ಹೆಚ್ಚಿವೆ. ಇಂತಹ ಪ್ರಕರಣಗಳು ಸುಮಾರು 50 ಸಾವಿರ ಮೀರಬಹುದು. ಇವುಗಳೆಲ್ಲವನ್ನೂ ತನಿಖೆ ನಡೆಸಲಾಗುತ್ತಿದೆ.

ಲಕ್ಷದೊಳಗೆ ಅಧಿಕ: ₹1 ಲಕ್ಷಕ್ಕಿಂತ ಕಡಿಮೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡಿರುವ 37,968 ಪ್ರಕರಣಗಳಿದ್ದು, ಇವುಗಳೆಲ್ಲ ಅಕ್ರಮ ಎಂದು ಪರಿಗಣಿಸಲಾಗಿದೆ. 484 ಚದರ ಅಡಿವರೆಗೆ ₹10 ಸಾವಿರ, 1,211 ಚದರ ಅಡಿವರೆಗೆ ₹25 ಸಾವಿರ, 2,422 ಚದರ ಅಡಿವರೆಗೆ ₹50 ಸಾವಿರ, 3,633 ಚದರ ಅಡಿವರೆಗೆ ₹75 ಸಾವಿರ, 4,844 ಚದರ ಅಡಿವರೆಗೆ ₹1 ಲಕ್ಷ, 24,219 ಚದರ ಅಡಿವರೆಗೆ ₹5 ಲಕ್ಷ, 48,438 ಚದರ ಅಡಿವರೆಗೆ ₹10 ಲಕ್ಷ ಅಭಿವೃದ್ಧಿ ಶುಲ್ಕವನ್ನು ಪಾವತಿಸಿಕೊಳ್ಳಲು ‘ಆರ್ ಕೋಡ್–130’ಯಲ್ಲಿ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.