ದಾಬಸ್ಪೇಟೆ: ಸೋಂಪುರ ಹೋಬಳಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿ ಆರು ಅನಧಿಕೃತ ಕ್ಲಿನಿಕ್ಗಳಿಗೆ ನೋಟಿಸ್ ಅಂಟಿಸಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹೇಮಾವತಿ ನೇತೃತ್ವದ ತಂಡವು ದಾಬಸ್ ಪೇಟೆಯ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ತಿರುಮಲ, ನರಸೀಪುರದ ಮಾರುತಿ ಹಾಗೂ ನಿಡವಂದದ ಶ್ರೀಮಾರುತಿ, ಶ್ರೀನಂದಿ ಮತ್ತು ಶ್ರೀಸಿದ್ಧಗಂಗಾ ಕ್ಲಿನಿಕ್ಗಳ ಪರಿಶೀಲನೆಗೆ ತೆರಳಿತು. ಅಧಿಕಾರಿಗಳು ಬರುವ ಮುನ್ಸೂಚನೆ ದೊರಕಿದ್ದರಿಂದ ಈ ಕ್ಲಿನಿಕ್ಗಳು ತೆರೆದಿರಲಿಲ್ಲ. ಅಧಿಕಾರಿಗಳು ಬಾಗಿಲಿನ ಬೀಗಕ್ಕೆ ಸೀಲ್ ಹಾಕಿ, ನೋಟಿಸ್ ಅಂಟಿಸಿದರು.

‘ಈ ಕ್ಲಿನಿಕ್ಗಳು ಕೆಪಿಎಂ ಕಾಯ್ದೆಗೆ ಒಳಪಡದೆ ಅನಧಿಕೃತವಾಗಿ ನಡೆಸುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳ ಆದೇಶದ ಮೇರೆಗೆ ಸೀಜ್ ಮಾಡಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಹೇಮಾವತಿ ತಿಳಿಸಿದರು.

ದಾಖಲಾತಿಗಳನ್ನು ಹಾಜರುಪಡಿಸಿ ಪರವಾನಗಿ ಪಡೆಯಲು ಹಿಂದೆ ನೋಟಿಸ್ ನೀಡಲಾಗಿತ್ತು. ಆದರೂ ಪರವಾನಗಿ ಪಡೆದಿರಲಿಲ್ಲ ಎಂದು ಮಾಹಿತಿ ನೀಡಿದರು.

ಆರೋಗ್ಯ ನಿರೀಕ್ಷಕ ನಾಗೇಶ, ಎಸ್.ಡಿ.ಎ ಮಂಜುನಾಥ , ಸಿಬ್ಬಂದಿ ನಾಗರ್ಜುನ್, ಗೀರಿಶ್ ರಾವ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.