ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದ ಬಳಿಕ ಮೂರೇ ದಿನಗಳಲ್ಲಿ ಒಟ್ಟು ₹ 22.32 ಕೋಟಿ ದಂಡ ಸಂಗ್ರಹವಾಗಿದ್ದು, 7.41 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ.

ಸರ್ಕಾರ ಘೋಷಿಸಿರುವ ರಿಯಾಯಿತಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜನರು ಉತ್ಸಾಹದಿಂದ ದಂಡ ಪಾವತಿಸಿದ್ದಾರೆ. ಭಾನುವಾರ ಒಂದೇ ದಿನದಲ್ಲಿ 2 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹ 6.31 ಕೋಟಿ ದಂಡ ಸಂಗ್ರಹವಾಗಿದೆ.

ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಭಾನುವಾರವೂ ಪೊಲೀಸರು ದಂಡ ಕಟ್ಟಿಸಿಕೊಂಡರು. 1,053 ಮಂದಿ ಕೇಂದ್ರಕ್ಕೆ ಭೇಟಿ ನೀಡಿ, ಸರದಿಯಲ್ಲಿ ನಿಂತು ₹ 2.64 ಲಕ್ಷ ದಂಡ ಪಾವತಿಸಿದರು.

ಭಾನುವಾರ ಸಂಗ್ರಹವಾದ ದಂಡದ ವಿವರ (ದಂಡ ಪಾವತಿ ಮಾದರಿ; ಇತ್ಯರ್ಥ ಪ್ರಕರಣಗಳು; ಸಂಗ್ರಹವಾದ ದಂಡ)

ಪೊಲೀಸರ ಬಳಿಯ ಉಪಕರಣ; 70,716; ₹1.97 ಕೋಟಿ

ಪೇಟಿಂಎ; 1,14,617; ₹3.79 ಕೋಟಿ

ಬೆಂಗಳೂರು ಒನ್ ಕೇಂದ್ರ; 19,940; 51.60 ಲಕ್ಷ

ಪೇಟಿಎಂಗೆ ಶೇ 2ರಷ್ಟು ಕಮಿಷನ್: ಜೇಬಿಗೆ ಕತ್ತರಿ‘

‘ಜನರು ಪಾವತಿಸುತ್ತಿರುವ ದಂಡದ ಮೊತ್ತದ ಮೇಲೆ ಶೇ 2ರಷ್ಟು ಕಮಿಷನ್ ಪೇಟಿಎಂ ಪಾಲಾಗುತ್ತಿದೆ. ದಂಡದ ಜೊತೆ ವಿನಾಕಾರಣ ಪ್ರತ್ಯೇಕ ಕಮಿಷನ್ ನೀಡುವಂತಾಗಿದೆ’ ಎಂದು ಸಾರ್ವಜನಿಕರು ದೂರಿದರು.

‘ಹೆಚ್ಚಿನ ಸಂಖ್ಯೆಯ ಜನರು, ಪೇಟಿಎಂ ಆ್ಯಪ್ ಮೂಲಕ ದಂಡ ಪಾವತಿಸುತ್ತಿದ್ದಾರೆ. ₹ 250 ದಂಡವಿದ್ದರೆ, ₹ 5 ಕಮಿಷನ್ ಸೇರಿ ₹ 255 ಪಾವತಿಸುತ್ತಿದ್ದಾರೆ’ ಎಂದರು.

‘ಮೂರು ದಿನಗಳಲ್ಲಿ ಪೇಟಿಎಂ ಮೂಲಕವೇ ₹ 10 ಕೋಟಿಗೂ ಹೆಚ್ಚು ದಂಡ ಸಂಗ್ರಹವಾಗಿದೆ. ಇದರಲ್ಲಿ ಶೇ 2ರಷ್ಟು ಪಾಲು ಪೇಟಿಎಂಗೆ ಸೇರಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.