ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿರುವ ಪ್ರತಿಷ್ಠಿತರ ಕಟ್ಟಡ ಗಳನ್ನು ತೆರವುಗೊಳಿಸಲು ನ್ಯಾಯಾಲಯ ದಲ್ಲಿದ್ದ ಪ್ರಕರಣಗಳು ಬಗೆಹರಿ ದಿದ್ದರೂ, ಕಾರ್ಯಾಚರಣೆಗೆ ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ.

ಕಳೆದ ವರ್ಷ ಭಾರಿ ಮಳೆಗೆ ‘ಮುಳುಗಿದ ಬೆಂಗಳೂರು ಪೂರ್ವ’ ಎಂದು ಕಳಂಕ ಕ್ಕೀಡಾಗಿದ್ದ ಮಹದೇವಪುರ ವಲಯದಲ್ಲಿ ನಲಪಾಡ್, ಬಾಗ್ಮನೆ– ಪುರ್ವಂಕರ, ರೈನ್ಬೊ ಡ್ರೈವ್ ಲೇಔಟ್ ಮುಂತಾದ ಪ್ರತಿಷ್ಠಿತ ಬಡಾವಣೆಗಳಲ್ಲಿ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳ ಲಾಗಿದೆ ಎಂದು ಆರೋಪಿಸ ಲಾಗಿತ್ತು. ಈ ಮೊದಲು ತೆರವಿಗೆ ಮುಂದಾದಾಗ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ಇದೀಗ ತಡೆಯಾಜ್ಞೆ ತೆರವಾಗಿದ್ದರೂ ಬಿಬಿಎಂಪಿ ಅಧಿಕಾರಿಗಳು ತೆರವಿಗೆ ಮುಂದಾಗುತ್ತಿಲ್ಲ.

ಬಿಬಿಎಂಪಿ ಮಾಹಿತಿ ಪ್ರಕಾರ, 2016ರಲ್ಲಿ ರಾಜಕಾಲುವೆಯ 2,951 ಒತ್ತುವರಿ ಪ್ರಕರಣ ಗಳಿದ್ದವು. ಕಾಲಕಾಲಕ್ಕೆ ತೆರವುಗೊಳಿಸಿ ಆ ಸಂಖ್ಯೆ ಇದೀಗ 784ಕ್ಕೆ ಬಂದಿದೆ. ನ್ಯಾಯಾ ಲಯದಲ್ಲಿರುವ ಪ್ರಕರಣಗಳು, ಬಿಬಿಎಂಪಿಯೇ ಒತ್ತುವರಿ ಮಾಡಿ ಕೊಂಡಿರುವ ಸ್ಥಳಗಳು, ಕಾಲುವೆ ಮಾರ್ಗ ಬದಲಾದ ಪ್ರದೇಶಗಳನ್ನು ಹೊರತುಪಡಿಸಿದರೆ 607 ಪ್ರಕರಣ ಗಳಲ್ಲಿ ಈಗ ಒತ್ತುವರಿಯಾಗಿದೆ. ಇದರಲ್ಲಿ 119 ಸ್ಥಳಗಳಲ್ಲಿ ತೆರವಿಗೆ ತಹಶೀಲ್ದಾರ್ ಕೂಡ ಆದೇಶ ನೀಡಿದ್ದಾರೆ.

ಚಲ್ಲಘಟ್ಟದಲ್ಲಿ ನಲಪಾಡ್ ಅಕಾಡೆಮಿ ಎಂಬೆಸ್ಸಿ ಒತ್ತುವರಿಗೆ ಸಂಬಂಧಿಸಿದಂತೆ, ನ್ಯಾಯಾಲಯ ದಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಜತೆಗೆ ಸರ್ವೆ ನಡೆಸಿದ ತಹಶೀಲ್ದಾರ್ ಅವರಿಂದ ನೋಟಿಸ್ ಜಾರಿ ಹಾಗೂ ತೆರವಿಗೆ ಆದೇಶವಾಗಿದ್ದರೂ ಕಾರ್ಯಾಚರಣೆ ಮಾತ್ರ ನಡೆದಿಲ್ಲ. ಇದೇ ರೀತಿ, ಹಾಲನಾಯಕಹಳ್ಳಿಯಲ್ಲಿ ಆರ್ಬಿಡಿ (ರೈನ್ಬೊ ಡ್ರೈವ್) ಲೇಔಟ್, ಜುನ್ನಸಂದ್ರ, ಮುನ್ನೇಕೊಳಾಲು, ದೊಡ್ಡನೆಕ್ಕುಂದಿಯಲ್ಲಿ ಫೆರ್ನ್ ಸಿಟಿ, ಕಾಡುಬಿಸನಹಳ್ಳಿ ಯಲ್ಲಿ ಉಮಿಯಾ ಬ್ಯುಸಿನೆಸ್ಗಳ ಒತ್ತುವರಿ ತೆರವಿನ ಆದೇಶ ಅಧಿಕಾರಿಗಳ ಕೈಯಲ್ಲೇ ಇದ್ದರೂ ಕಾರ್ಯಾಚರಣೆ ಕೈಗೊಳ್ಳಲು ಸಿಬ್ಬಂದಿಗೆ ಸೂಚನೆ ನೀಡಿಲ್ಲ.

ಇಂತಹ ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ, ‘ಮೊಕದ್ದಮೆ ಇತ್ಯರ್ಥ, ತೆರವು ಕಾರ್ಯಾಚರಣೆ ಕೈಗೊಳ್ಳಬೇಕಿದೆ’ ಎಂದು ಬಿಬಿಎಂಪಿ ದಾಖಲೆಯಲ್ಲಿ ಷರಾ ಬರೆಯಲಾಗಿದೆ. ಹಲವು ಪ್ರಕರಣಗ ಳಲ್ಲಿ ತೆರವಿಗೆ ತಹಶೀಲ್ದಾರ್ ಆದೇಶವಿದೆ. ಇನ್ನುಳಿದ್ದಕ್ಕೆ, ಆದೇಶ ನೀಡಲು ತಹ ಶೀಲ್ದಾರ್ಗಳು ಸಾಕಷ್ಟು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳೇ ದೂರುತ್ತಾರೆ.

ಎಲ್ಲವೂ ತೆರವು...

‘ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪ್ರತಿದಿನವೂ ನಡೆಯುತ್ತಿದೆ. ಯಾವ ಒತ್ತುವರಿಯನ್ನೂ ಬಿಡುವುದಿಲ್ಲ. ಒಂದು ದಿನ ದೊಡ್ಡ ಕಟ್ಟಡ ತೆರವಾದಾಗ ಎಲ್ಲರಿಗೂ ಗೊತ್ತಾಗುತ್ತದೆ. ಕೆಲವು ಬಾರಿ ಕಾಂಪೌಂಡ್, ಶೆಡ್ ತೆರವಾದಾಗ ದೊಡ್ಡ ಸುದ್ದಿ ಆಗುವುದಿಲ್ಲ ಅಷ್ಟೇ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.