ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆಯಲು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ರಂಜನ್ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೊಟ್ಟೆ ರವಾನೆ ಮಾಡಲಾಗುವುದು ಎಂದು ಶನಿವಾರ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಕಾರ್ಯಕರ್ತರು ತಿಳಿಸಿದರು.

‘ಬಿಜೆಪಿಯ ಕೆಲವು ಗೂಂಡಾ ಪ್ರವೃತ್ತಿಯಿರುವ ವ್ಯಕ್ತಿಗಳು ಕರ್ನಾಟಕದ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ. ಬಿಜೆಪಿ ಶಾಸಕರು, ಸಚಿವರೇ ವಿರೋಧ ಪಕ್ಷಗಳ ವಿರುದ್ಧ ಈ ರೀತಿಯ ಹೀನಾಯ ಕೃತ್ಯ ಎಸಗಲು ತಮ್ಮ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೀಳುಮಟ್ಟದ ರಾಜಕೀಯ ನಡೆಸಿ ಬಿಜೆಪಿಯ ಯೋಗ್ಯತೆಯನ್ನು ಜನರ ಮುಂದೆ ಅವರೇ ಬಹಿರಂಗ ಪಡಿಸಿಕೊಂಡಿದ್ದಾರೆ’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಹೇಳಿದರು. ಇದೇ ವೇಳೆ ಅಪ್ಪಚ್ಚು ರಂಜನ್ ಪ್ರತಿಕೃತಿ ದಹಿಸಲಾಯಿತು.

ಬೆಂಗಳೂರು ನಗರ ಪ್ರಚಾರ ಸಮಿತಿ ಅಧ್ಯಕ್ಷ ಎ.ಆನಂದ್, ಮುಖಂಡರಾದ ಸುಧಾಕರ್, ಪ್ರಕಾಶ್, ವೆಂಕಟೇಶ್, ಮಂಜುನಾಥ್, ಅನಿಲ್, ಚೇತನ್, ಚಿಕ್ಕಣ್ಣ, ಪುಟ್ಟರಾಜು, ಸುಪ್ರಜ್, ಪ್ರಶಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.