ಬೆಂಗಳೂರು: ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಕಾಮಗಾರಿ ವೇಳೆ ಉರುಳಿದ ಕಬ್ಬಿಣದ ಚೌಕಟ್ಟು 16.5 ಮೀಟರ್ ಎತ್ತರವಿತ್ತು. ಅಂದಾಜು 40 ಟನ್ ತೂಕವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್.ಪುರ–ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ 38.44 ಕಿ.ಮೀ ಕಾಮಗಾರಿ ನಡೆಯುತ್ತಿದೆ. ಹೈದರಾಬಾದ್‌ನ ಎನ್‌ಸಿಸಿ ಸಂಸ್ಥೆಯ ಮೂರು ಹಂತದಲ್ಲಿ ಕಾಮಗಾರಿ ಕೈಗೆತ್ತಿಗೊಂಡಿದೆ.

ಬೆನ್ನಿಗಾನಹಳ್ಳಿ–ಕೆಂಪಾಪುರ, ಕೆಂಪಾಪುರ–ಯಲಹಂಕ ಏರ್ ಫೋರ್ಸ್, ಐಎಎಫ್–ವಿಮಾನ ನಿಲ್ದಾಣದ ನಡುವೆ ₹ 9,583.54 ಕೋಟಿ ಮೊತ್ತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಈ ಘಟನೆಯಿಂದ ಕಾಮಗಾರಿ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.

‘ಈ ಮಾರ್ಗದಲ್ಲಿ ಕಬ್ಬಿಣದ ಚೌಕಟ್ಟು ನಿಲ್ಲಿಸಿ ಹಲವು ದಿನ ಕಳೆದಿದ್ದರೂ ಅದಕ್ಕೆ ಕಾಂಕ್ರೀಟ್ ಹಾಕಿರಲಿಲ್ಲ. ಭಾರ ಹೆಚ್ಚಾಗಿ ವಾಲಿಕೊಂಡಿತ್ತು. ಇತರೆ ಚೌಕಟ್ಟುಗಳಿಗಿಂತ ಉರುಳಿ ಬಿದ್ದ ಚೌಕಟ್ಟು ತುಸು ಎತ್ತರವಾಗಿತ್ತು. ಕಬ್ಬಿಣ ವಾಲಿಕೊಂಡಿದ್ದರೂ ಅದನ್ನು ಬೀಳದಂತೆ ತಡೆಯುವುದಕ್ಕೆ ಮುನ್ನೆಚ್ಚರಿಕೆ ವಹಿಸಿರಲಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.