ಬೆಂಗಳೂರು: ‘ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ 2013–18ರ ಅವಧಿ ಸುವರ್ಣಯುಗವಾಗಿತ್ತು. ಅವಾಗಿನ ಸ್ವಾತಂತ್ರ್ಯ ಈಗ ಇದ್ದಂತಿಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಗವಿಮಾರ್ಗ ಪುಸ್ತಕ ಬಿಡುಗಡೆ, ವಿ.ಪಿ. ಸಿಂಗ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ‘ಮಂಡಲ್ ವರದಿ ಆಗಿದ್ದೇನು?’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಆ ಅವಧಿಯಲ್ಲಿ ಕ್ರಾಂತಿಕಾರಕ ಕೆಲಸಗಳು ಆಗಿದ್ದವು. ಹಿಂದಿನ ದಿನ ಚರ್ಚೆಯಾದರೆ, ಮರುದಿನವೇ ಜಾರಿಯಾಗುತ್ತಿತ್ತು. ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಬಾರಿ ಅಂಥ ಸ್ವಾತಂತ್ರ್ಯ ಮುಖ್ಯಮಂತ್ರಿಯವರಿಗೆ ಇಲ್ಲ ಎಂದನ್ನಿಸುತ್ತಿದೆ. ಶಾಸಕರ ಒತ್ತಡವೂ ಸೇರಿದಂತೆ ಬೇರೆ ಬೇರೆ ವಿಚಾರಗಳು ಇದಕ್ಕೆ ಕಾರಣ ಇರಬೇಕು’ ಎಂದು ವಿಶ್ಲೇಷಿಸಿದರು.

ಯಾವುದೇ ಒತ್ತಡವಿದ್ದರೂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯವನ್ನು ಬಿಡುವವರಲ್ಲ ಎಂದರು.

‘ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಕಾಂತರಾಜ ವರದಿ ಸಿದ್ಧಪಡಿಸಲಾಗಿದೆ. ಆ ಜಾತಿಯವರನ್ನು ಹೆಚ್ಚು ಸೇರಿಸಿದ್ದಾರೆ, ಈ ಜಾತಿಯವರನ್ನು ಕಡಿಮೆ ಮಾಡಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿಯನ್ನೇ ಹರಡಿ ವರದಿ ಸ್ವೀಕರಿಸಲೂ ಬಿಟ್ಟಿಲ್ಲ. ಕಾಂತರಾಜ ವರದಿಯಂತೆ ಸದಾಶಿವ ಆಯೋಗದ ವರದಿಯೂ 12 ವರ್ಷಗಳಿಂದ ನನೆಗುದಿಗೆ ಬಿದ್ದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.