ಬೆಂಗಳೂರು: ಕೋವಿಡ್ ಮೂರನೇ ಅಲೆ ಹಬ್ಬುತ್ತಿದ್ದಂತೆಯೇ ನಗರದ ಹೊರಮಾವಿನ ಫುಡ್ ವಾರಿಯರ್ಸ್ ಮತ್ತೆ ದಾಸೋಹ ಆರಂಭಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ವೇಳೆಯೂ ಗಮನಾರ್ಹ ಪ್ರಮಾಣದಲ್ಲಿ ಆಹಾರ ಪೂರೈಸಿದ್ದ ತಂಡ ಈ ಬಾರಿಯೂ ತನ್ನ ಸೇವೆ ಆರಂಭಿಸಿದೆ. ಬೆಂಗಳೂರು ನಗರದಾದ್ಯಂತ ಕೋವಿಡ್ ಪೀಡಿತರಿಗೆ ಮನೆ ಆಹಾರ ತಲುಪಿಸುತ್ತಿದೆ.

ಇವರು ‘ಫುಡ್ ವಾರಿಯರ್ಸ್’.

ಹೊರಮಾವಿನಲ್ಲಿ ತಮ್ಮ ಗೃಹ ಉದ್ಯಮ ‘ದಿ ಸ್ವೀಟ್ ಅಫೇರ್ ಶಾಪ್’ ಹೆಸರಿನಲ್ಲಿ ಬೇಕರಿ ಉತ್ಪನ್ನ ಸಿದ್ಧಪಡಿಸುತ್ತಿರುವ ಸಮಂತಾ ಲಸಾರೋ ಅವರ ತಂಡ ‘ಫುಡ್ ವಾರಿಯರ್ಸ್’ ಪರಿಕಲ್ಪನೆ ರೂಪಿಸಿದೆ. ನಗರದ ವಿವಿಧ ಭಾಗಗಳಲ್ಲಿರುವ ಹತ್ತಾರು ಸ್ವಯಂ ಸೇವಕರು ಆಹಾರ ತಯಾರಿಕೆ, ವಿತರಣೆಯಲ್ಲಿ ಕೈಜೋಡಿಸಿದ್ದಾರೆ.

ಕಾರ್ಯಾಚರಣೆ ಹೇಗೆ?

ಫುಡ್ವಾರಿಯರ್ಸ್ ಜಾಲದಲ್ಲಿರುವವರು ಪ್ರತಿದಿನ ಮನೆಯಲ್ಲಿ ತಯಾರಿಸುವ ಆಹಾರವನ್ನು ಸ್ವಲ್ಪ ಹೆಚ್ಚು ತಯಾರಿಸುತ್ತಾರೆ. ಆಯಾ ಪ್ರದೇಶದ ಬೇಡಿಕೆಗೆ ಅನುಗುಣವಾಗಿ ಆಯಾ ಸಮೀಪದ ಮನೆಯವರು ಹೆಚ್ಚುವರಿ ಆಹಾರ ಸಿದ್ಧಪಡಿಸುತ್ತಾರೆ. ಸದ್ಯ ಮಧ್ಯಾಹ್ನ ಮತ್ತು ಸಂಜೆಯ ಊಟವನ್ನಷ್ಟೇ ಕಳುಹಿಸುತ್ತಿದ್ದಾರೆ. ಅವಶ್ಯಕತೆವುಳ್ಳವರು ಕರೆ ಮಾಡಿದಾಗ ವಿವರ ಪರಿಶೀಲಿಸಿ ಅವರಿಗೆ ಸಮೀಪವಿರುವ ಮನೆಯನ್ನು ಗುರುತಿಸಿ ಸ್ವಯಂ ಸೇವಕರಿಗೆ ವಿವರ ಕಳುಹಿಸುತ್ತಾರೆ. ಸ್ವಯಂ ಸೇವಕರು ಅಗತ್ಯವುಳ್ಳವರಿಗೆ ಕರೆ ಮಾಡಿ, ಆಹಾರ ತಯಾರಿಸಿರುವ ಸ್ಥಳದಿಂದ ತಲುಪಿಸುವ ಕುರಿತು ಮಾತನಾಡುತ್ತಾರೆ. ಮುಂದೆ ಆಹಾರ ಬೇಕಾದವು ಪೋರ್ಟರ್/ ಡನ್ಝೋದಂತ ವಿತರಕರ ಮೂಲಕ ಆಹಾರ ತರಿಸಿಕೊಳ್ಳಬಹುದು.

‘ಇಲ್ಲಿ ವಿತರಣಾ ಶುಲ್ಕವನ್ನಷ್ಟೇ ಪಾವತಿಸಬೇಕಾಗುತ್ತದೆ. ಆಹಾರಕ್ಕೆ ಯಾವುದೇ ಶುಲ್ಕ ಇಲ್ಲ. ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಏಕಕಾಲಕ್ಕೆ ಕಳುಹಿಸಲಾಗುತ್ತದೆ. ಪ್ರತಿದಿನ 60 ಮಂದಿಗೆ ಊಟ ಕಳುಹಿಸುತ್ತಿದ್ದೇವೆ’ ಎಂದರು ಸಮಂತಾ.

‘ಸದ್ಯ ಒಟ್ಟು 60 ಜನರ ತಂಡವಿದೆ. ಆಸಕ್ತರು ಇನ್ನಷ್ಟು ಜನರು ಕೈ ಜೋಡಿಸಬಹುದು. ಹಾಗಾದಾಗ ಮತ್ತಷ್ಟು ಜನರಿಗೆ ಆಹಾರ ತಲ ಸಾಕಷ್ಟು ಅವಶ್ಯಕತೆ ಉಳ್ಳವರಿಗೆ ನಾವು ತಲುಪಿಸಲು ಸಾಧ್ಯ’ ಎನ್ನುತ್ತಾರೆ ಸಮಂತಾ

ಸ್ವಯಂ ಸೇವಕರಾಗಲು ಮೊಬೈಲ್: 9880945552

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.