ರಾಜರಾಜೇಶ್ವರಿನಗರ: ನಾಗದೇವನಹಳ್ಳಿಯಲ್ಲಿ ಕಾಡುಗೊಲ್ಲ ಜನಾಂಗದ ಆರಾದ್ಯ ದೈವ ಶ್ರೀ ಭೂತಪ್ಪಸ್ವಾಮಿ ದೇವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

ನಾಗದೇವನಹಳ್ಳಿ, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿಯ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿರುವ ಜಾತ್ರಾಮಹೋತ್ಸವದಲ್ಲಿ ಮೂರು ಗ್ರಾಮಗಳ ಹಿರಿಯರು, ದೇವಸ್ಥಾನದ ಆಡಳಿತ ಮಂಡಳಿಯವರು, ಅರ್ಚಕರು, ಸಂಬಂಧಿಕರು, ನೆಂಟರಿಷ್ಟರು, ಸುತ್ತಮುತ್ತಲಿನ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.

ಮೂರು ಗ್ರಾಮಗಳ ಹೆಣ್ಣು ಮಕ್ಕಳು ಶ್ರದ್ಧೆಯಿಂದ ಆರತಿ ಎತ್ತಿ, ತಂಬಿಟ್ಟು ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಭೂತಪ್ಪಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ನಾಗದೇವನಹಳ್ಳಿ, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದ ನಂತರ ದೇವಸ್ಥಾನಕ್ಕೆ ತೆರಳಿತು. ಗ್ರಾಮಸ್ಥರು ಹರಕೆ ತೀರಿಸಿದರು.

ದೇವಸ್ಥಾನ ಸುತ್ತ ಮುತ್ತ ಸಂಜೆ ಪೂಜಾಕುಣಿತ, ಪಟ್ಟದ ಕುಣಿತ, ವಿವಿಧ ಜನಪದ ಪ್ರದರ್ಶನಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಸಾಕಿರುವ ಕುರಿ, ಮೇಕೆಗಳಿಗೆ ಯಾವುದೇ ಕಾಯಿಲೆ ಬಾರದಂತೆ ದೇವರಲ್ಲಿ ಪೂಜೆ ಸಲ್ಲಿಸಿ ಕುರಿ, ಮೇಕೆಗಳನ್ನು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.

ನೂರಾರು ವರ್ಷಗಳಿಂದ ಕಾಡುಗೊಲ್ಲ ಜನಾಂಗದವರು ಒಗ್ಗೂಡಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನದ ಪದಾಧಿಕಾರಿಗಳು ಹಿರಿಯರ ಸಮ್ಮುಖದಲ್ಲಿ ಮುಂದುವರಿಸುತ್ತಿದ್ದಾರೆ. ಹಿಂದೆ ಮಣ್ಣಿನ ಗುಡಿಯಿತ್ತು. ಟ್ರಸ್ಟ್ ರಚನೆ ಮಾಡಿಕೊಂಡು, ದೇವಸ್ಥಾನ ಜೀರ್ಣೋದ್ಧಾರ ಮಾಡಲಾಯಿತು. ನಂತರ ಗ್ರಾಮೀಣ ಸೊಗಡನ್ನು ಯುವ ಜನಾಂಗಕ್ಕೆ ತಿಳಿಸಲು ಅದ್ದೂರಿ ಜಾತ್ರಾಮಹೋತ್ಸವ ನಡೆಸಲಾಗುತ್ತಿದೆ ಎಂದು ಭೂತಪ್ಪಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ ಮಾಹಿತಿ ನೀಡಿದರು.

ಪೂಜಾರಿ ಕಾಟಪ್ಪ, ತಿಮ್ಮಯ್ಯ, ರಾಮಣ್ಣ, ದೊಡ್ಡಯ್ಯ, ಪೂಜಾರಿ ಯರಪ್ಪ, ವಿವಿಧ ಗ್ರಾಮಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.