ಬೆಂಗಳೂರು: ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ಏಳು ರೌಡಿಗಳನ್ನು ನಗರದ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

‘ಕೇಂದ್ರ, ಪೂರ್ವ, ಉತ್ತರ ಹಾಗೂ ದಕ್ಷಿಣ ವಿಭಾಗದಲ್ಲಿದ್ದ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೊಲೆ, ಕೊಲೆ ಯತ್ನ, ಜೀವ ಬೆದರಿಕೆ, ಸುಲಿಗೆ, ಹಲ್ಲೆ, ಅಪಹರಣ, ಸಾಕ್ಷಿಗಳಿಗೆ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ರೌಡಿಗಳ ಮೇಲಿತ್ತು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.

‘ವಿನಯ್‌ಕುಮಾರ್ ಅಲಿಯಾಸ್ ಮಿಂಡ (30), ದಯಾನಂದ್ ಅಲಿಯಾಸ್ ನಂದ (28), ಶ್ರೀಕಾಂತ್ ಅಲಿಯಾಸ್ ಊಸ್ (30), ಖಲೀಲ್ ಅಹಮದ್ ಅಲಿಯಾಸ್ ಡೈನ್‌ಮೆಂಟ್ (35), ಗಾರ್ಡನ್ ಸುಹೇಲ್ (34), ರಿಜ್ವಾನ್ ಅಲಿಯಾಸ್ ಕುಳ್ಳ ರಿಜ್ವಾನ್ (35), ಅನೀಸ್ ಅಹಮದ್ ಅಲಿಯಾಸ್ ಎಕ್ಸ್‌ಎಕ್ಸ್‌ಎಕ್ಸ್ ಬಂಧಿತ ರೌಡಿಗಳು’ ಎಂದರೂ ತಿಳಿಸಿದರು.

‘ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗುವರ ಮೇಲೆ ಕಣ್ಣಿಡಲಾಗಿದೆ. ಸಾರ್ವಜನಿಕರನ್ನು ಬೆದರಿಸುವ ಹಾಗೂ ಅಪರಾಧ ಕೃತ್ಯದಲ್ಲಿ ಪಾಲ್ಗೊಳ್ಳುವ ರೌಡಿಗಳನ್ನು ಹಿಡಿದು ಜೈಲಿಗೆ ಕಳುಹಿಸುವ ಪ್ರಕ್ರಿಯೆ ಮುಂದುವರಿಯಲಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.