ಬೆಂಗಳೂರು: ಮಾನವ ಕಳ್ಳ ಸಾಗಣೆ ವಿರುದ್ಧ 2013ರಿಂದ 2020ರ ಜೂನ್‌ವರೆಗೆ ರಾಜ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1,373 ಜನರನ್ನು ರಕ್ಷಿಸಲಾಗಿದೆ.

ಹೊರ ರಾಜ್ಯದ ಇವರನ್ನು ಹಣದ ಆಮಿಷವೊಡ್ಡಿ ಕಳ್ಳ ಸಾಗಣೆ ಮೂಲಕ ರಾಜ್ಯಕ್ಕೆ ಕರೆತಂದು ಜೀತಕ್ಕೆ ದೂಡಲಾಗಿತ್ತು. ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲಾಗುತ್ತಿತ್ತು. ಇವರಲ್ಲಿ ಬಹುತೇಕರು ಒಡಿಶಾದವರಾಗಿದ್ದರು.

ಪೊಲೀಸ್ ಇಲಾಖೆ, ಸಿಐಡಿ, ರೈಲ್ವೆ ರಕ್ಷಣಾ ದಳ (ಆರ್‌ಪಿಎಫ್), ಜಿಲ್ಲಾಡಳಿತಗಳು, ಮಾನವ ಕಳ್ಳ ಸಾಗಣೆ ವಿರೋಧಿ ಘಟಕಗಳು (ಎಎಚ್‌ಟಿಯು) ಹಾಗೂ ಇಂಟರ್‌ನ್ಯಾಷನಲ್ ಜಸ್ಟಿಸ್ ಮಿಷನ್ (ಐಜೆಎಂ) ಸ್ವಯಂ ಸೇವಾ ಸಂಸ್ಥೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿವೆ.

ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಮಾನವ ಕಳ್ಳ ಸಾಗಣೆಗೆ ಸಿಲುಕಿದ್ದವರನ್ನು ಗುರುತಿಸುವುದು ಹಾಗೂ ರಕ್ಷಿಸುವಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ.

ಮಾನವ ಕಳ್ಳ ಸಾಗಣೆ ಮಾಡುವರ ವಿರುದ್ಧ ಐಪಿಸಿ ಸೆಕ್ಷನ್ 370ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ಮಾನವ ಹಕ್ಕುಗಳಿಗೆ ವಿರುದ್ಧವಾಗಿ ದುರುದ್ದೇಶದಿಂದ ಬೆದರಿಕೆಯೊಡ್ಡಿ ಬಲವಂತದಿಂದ ಅಪಹರಣ ಮಾಡಿ ಮಾನವರನ್ನು ಸಾಗಣೆ ಮಾಡುವುದು ಅಪರಾಧವಾಗುತ್ತದೆ.

ಕಳ್ಳ ಸಾಗಣೆ ಮೂಲಕ ಜನರನ್ನು ಜೀತಕ್ಕೆ ನಿಯೋಜಿಸಿಕೊಳ್ಳುವ ಮಾಲೀಕರು ಹಾಗೂ ಸಂಬಂಧಪಟ್ಟವರ ವಿರುದ್ಧ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಲು ಅವಕಾಶವಿದೆ.

53 ಪ್ರಕರಣ- ಕಳ್ಳ ಸಾಗಣೆ ವಿರುದ್ಧ 2013ರಿಂದ 2020ರ ಜೂನ್‌ವರೆಗೆ ದಾಖಲಾದ ಪ್ರಕರಣಗಳು

ಕಳ್ಳ ಸಾಗಣೆ ವಿರುದ್ಧ ವರ್ಷವಾರು ಕಾರ್ಯಾಚರಣೆ

2013; 14

2014; 17

2015; 8

2016; 19

2017; 10

(ಆಧಾರ: ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ (ಎನ್‌ಸಿಆರ್‌ಬಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.