ಮೈಸೂರು: ಅಂತರರಾಜ್ಯ ದಂತಚೋರ ಸೇರಿದಂತೆ ನಾಲ್ವರನ್ನು ಇಲ್ಲಿನ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿಇವರಿಂದ 25 ಕೆ.ಜಿ ತೂಕದ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಿರುವನಂತಪುರದ ಪ್ರೆಸ್ಟಿನ್ ಸೆಲ್ವ, ಜಯಪ್ರಕಾಶ್, ಇಲ್ಲಿನ ಉದಯಗಿರಿಯ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಬಂಧಿತರು.

ಬನ್ನಿಮಂಪಟದ ಕೆಳಸೇತುವೆ ಬಳಿ ಇವರು 4 ಆನೆದಂತಗಳನ್ನು 8 ಭಾಗಗಳನ್ನಾಗಿ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅಧಿ ಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಂದು ಕೆ.ಜಿಗೆ ₹ 20 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಇವರಲ್ಲಿ ಪ್ರೆಸ್ಟಿನ್ ಸೆಲ್ವ ವಿರುದ್ಧ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಮೇಶ್ ಮತ್ತು ಮೋಹನ್ ವಿಗ್ರಹ ಕೆತ್ತುವ ಕಲಾವಿದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಫ್ ಎ.ಟಿ.ಪೂವಯ್ಯ, ಎಸಿಎಫ್ ಸುವರ್ಣ, ಆರ್ಎಫ್ಒ ವಿವೇಕ್, ಸಿಬ್ಬಂದಿಯಾದ ಮೋಹನ್, ಲಕ್ಷ್ಮೀಶ್, ಸುಂದರ್, ಪ್ರಮೋದ್, ತುಷಾರಾ, ಸ್ನೇಹಾ, ಮೇಘನಾ, ಚನ್ನಬಸವಯ್ಯ, ಗೋವಿಂದ, ರವಿನಂದನ್ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.