ಬೆಂಗಳೂರು: ಜಾತಿ, ವರ್ಗಗಳ ನಡುವೆ ಪರಸ್ಪರ ಹೆಚ್ಚುತ್ತಿರುವ ಸಂಘರ್ಷ ತಪ್ಪಿಸಿ ಎಲ್ಲಾ ವರ್ಗದ ಜನರ ನಡುವೆ ಪ್ರೀತಿ ಹಂಚುವ ಕಾರ್ಯ ತುರ್ತಾಗಿ ನಡೆಯುವ ಅಗತ್ಯವಿದೆ ಎಂದು ಜೈನಮುನಿ ಪ್ರವೀಣ್ ಋಷಿಜಿ ಹೇಳಿದರು.

ಗುರು ಆನಂದ ಚಾತುರ್ಮಾಸ್ಯ ಸಮಿತಿ ವತಿಯಿಂದ ಆಚಾರ್ಯ ಆನಂದ ಋಷಿಜಿ ಅವರ 120ನೇ ಜನ್ಮದಿನದ ಅಂಗವಾಗಿ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವಶಾಂತಿಗಾಗಿ ಉಪವಾಸ ವ್ರತದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೇವಲ ನೀರು ಕುಡಿದು 192 ಗಂಟೆಗಳ ಕಾಲ ಉಪವಾಸ ಮಾಡುವುದು ಸುಲಭದ ಕೆಲಸವಲ್ಲ. ಆದರೂ, ವಿಶ್ವ ಶಾಂತಿಗಾಗಿ ಈ ವ್ರತ ಆಚರಿಸಲಾಯಿತು. ಎಲ್ಲಾ ವರ್ಗ, ಜಾತಿಯ ಜನರು ಇದರಲ್ಲಿ ಪಾಲ್ಗೊಂಡಿದ್ದು ಸಂತಸದ ಸಂಗತಿ’ ಎಂದರು.

ಕಾರ್ಯಕ್ರಮದಲ್ಲಿ ಜೈನ ಸಮುದಾಯದ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.