ಬೆಂಗಳೂರು: ಜಾನೂರ್ ಕಲೆಯ ಮೂಲಕ ಕಪ್ಪು ಸುಂದರಿ ಪ್ರತಿಮೆಗೆ ಎಳೆ ತೆಂಗಿನ ಗರಿಗಳಿಂದ ತೊಡಿಸಿದ್ದ ಉಡುಗೆ ರೂಪದರ್ಶಿಯರನ್ನು ನಾಚಿಸುವಂತ್ತಿತ್ತು. ತರಕಾರಿಗಳಿಂದ ಮಾಡಿದ ನವಿಲು, ಸರ್ವ ಹಾಗೂ ಇತರೆ ಕಲೆಗಳು ನೋಡುಗರ ಮನಸೂರೆಗೊಂಡವು. ಇಕೆಬಾನ ಹೂಗಳ ಪ್ರದರ್ಶನ ಚಿತ್ತಾಕರ್ಷಕವಾಗಿತ್ತು. ಜನರು ತಮ್ಮ ಇಷ್ಟದ ಪ್ರದರ್ಶನಗಳ ಎದುರು ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಆಯೋಜಿ ಸಿರುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಲಾಲ್ಬಾಗ್ನ ಎಂ.ಎಚ್.ಮರೀಗೌಡ ಸ್ಮಾರಕ ಭವನದಲ್ಲಿ ಆಯೋಜಿಸಿರುವ ವಿಶೇಷ ಪ್ರದರ್ಶನದಲ್ಲಿ ಶನಿವಾರ ಕಂಡುಬಂದ ದೃಶ್ಯವಿದು.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಇಕೆಬಾನ, ಪುಷ್ಪ ಭಾರತಿ, ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್ ಆರ್ಟ್, ತೆಂಗಿನ ಗರಿಯ ಚಿತ್ತಾರದಿಂದ ಕೂಡಿದ ಜಾನೂರ್ ಕಲೆ, ಡಚ್ ಹೂವಿನ ಜೋಡಣೆ ಮತ್ತು ಬೋನ್ಸಾಯ್ ಗಿಡಗಳ ಪ್ರದರ್ಶನವನ್ನು ಸಾಹಿತಿ ಎ.ಜಿ. ರತ್ನ ಕಾಳೇಗೌಡ ಉದ್ಘಾಟಿಸಿದರು.

ಜಾನೂರ್ ಕಲೆಯಿಂದ ಸಿದ್ಧಪಡಿಸಲಾಗಿದ್ದ ಸೆಲ್ಫಿ ಬೂತ್ ಒಳಗೆ ನಿಂತು ಚಿಣ್ಣರು ಮಹಿಳೆಯರು ತಮ್ಮಿಷ್ಟದ ಭಂಗಿಯಲ್ಲಿ ನಿಂತು ಪೋಷಕರೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಜಾನೂರು ಕಲೆಯ ಚಿತ್ತಾರದಲ್ಲಿ ಮೂಡಿ ಬಂದ ಪುನೀತ್ ರಾಜ್ಕುಮಾರ್ ಅವರ ನಗುಮುಖದ ಈ ಪ್ರದರ್ಶನಕ್ಕೆ ಮತ್ತಷ್ಟು ಮೆರುಗು
ನೀಡಿತು.

ಎರಡನೇ ದಿನವಾದ ಶನಿವಾರ ಒಟ್ಟು 21 ಸಾವಿರ ಮಂದಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಲಾಲ್ಬಾಗ್ ಉಪನಿರ್ದೇಶಕಿ ಕುಸುಮಾ ಮಾಹಿತಿನೀಡಿದರು.

ತೆಂಗು ಸಹಿತ ವಿವಿಧ ಗರಿಗಳ ಚಿತ್ತಾರವೇ ಜಾನೂರ್ ಕಲೆ

ಅಂಕಿ ಅಂಶ:

ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದವರು (ಶನಿವಾರ)

ವಯಸ್ಕರು; 18 ಸಾವಿರ

ಮಕ್ಕಳು; 3 ಸಾವಿರ

ಒಟ್ಟು; 21 ಸಾವಿರ

ಸಂಗ್ರಹವಾದ ಹಣ; ₹12.50ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.