ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ 8.30ಕ್ಕೆ ‘ಕುರುಕ್ಷೇತ್ರ’ ಎಂಬ ನಾಟಕ ಪ್ರದರ್ಶನವಿದ್ದು, ಅದರಲ್ಲಿ ಮುಸ್ಲಿಂ ಕಲಾವಿದರು ಅಭಿನಯಿಸು ತ್ತಿದ್ದಾರೆ.

ಸಾಮರಸ್ಯದ ಸಂದೇಶವಾಗಿ ಈ ನಾಟಕವನ್ನು ವೀರಾಂಜನೇಯಸ್ವಾಮಿ ಕಲಾ ವೃಂದದ ಅಡಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಹಿಂದೂ-ಮುಸ್ಲಿಮರ ಭಾವೈಕ್ಯ ಹಾಗೂ ಸುತ್ತಮುತ್ತಲ ಗ್ರಾಮಗಳ ನಡುವಿನ ಸಾಮರಸ್ಯ ಮೂಡಿಸಲು ತಂಡ ಹೊರಟಿದೆ ಎಂದು ಆಯೋಜಕ ನಯಾಜ್ ಖಾನ್ ಹೇಳಿದರು.

5 ಸಾವಿರ ಆಸನ ವ್ಯವಸ್ಥೆ, ಎಲ್.ಇ.ಡಿ ಪರದೆ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಕಲಾವಿದರೇ ಇರುವ ನಾಟಕದಲ್ಲಿ ಮಹಿಳಾ ಪಾತ್ರಧಾರಿಗಳಾಗಿ ಹಿಂದೂಗಳು ಅಭಿನಯಿಸಲಿದ್ದಾರೆ. ಹಾರ್ಮೋನಿಯಂ ಮಾಸ್ಟರ್ ಮುನಿರಾಜು ನಾಟಕ ನಿರ್ದೇಶನ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.