ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ 19 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷವು (ಎಸ್‌ಯುಸಿಐ–ಸಿ) ಶುಕ್ರವಾರ ಬಿಡುಗಡೆ ಮಾಡಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಉಮಾ, ‘ 10 ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆ ಮಾಡಿದೆ. ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಮೌನವಾಗಿದೆ. ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತ ತೀರ ಕೆಳಸ್ಥಾನದಲ್ಲಿದೆ‘ ಎಂದು ದೂರಿದರು.

‘ಕೋಮುವಾದಿ ಬಂಡವಾಳಶಾಹಿ ನೀತಿಗಳ ವಿರುದ್ಧ ಈ ಚುನಾವಣೆಯಲ್ಲಿ ಜನಪರ ಧ್ವನಿ ಮೊಳಗಬೇಕು. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಿಂದ ನೈಜ ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಪರ್ಯಾಯ ನೀಡಲು ಖಂಡಿತ ಅಸಾಧ್ಯ. ಆದ್ದರಿಂದ ನಮ್ಮ ಪಕ್ಷವನ್ನು ಬೆಂಬಲಿಸುವಂತೆ’ ಮನವಿ ಮಾಡಿದರು.

ಅಭ್ಯರ್ಥಿಗಳ ಪಟ್ಟಿ:

ಲಕ್ಷ್ಮಣ ಜಡಗಣ್ಣನವರ್ (ಬೆಳಗಾವಿ), ಎಚ್.ಟಿ. ಮಲ್ಲಿಕಾರ್ಜುನ್ (ಬಾಗಲಕೋಟೆ), ನಾಗಜ್ಯೋತಿ (ವಿಜಯಪುರ), ಎಸ್.ಎಂ. ಶರ್ಮ (ಕಲಬುರಗಿ), ರಾಮಲಿಂಗಪ್ಪ (ರಾಯಚೂರು), ಶರಣು ಗಡ್ಡಿ (ಕೊಪ್ಪಳ), ಎ. ದೇವದಾಸ್ (ಬಳ್ಳಾರಿ), ಗಂಗಾಧರ ಬಡಿಗೇರ (ಹಾವೇರಿ), ಶರಣಬಸವರ ಗೋನವಾರ (ಧಾರವಾಡ), ಗಣಪತಿ ವಿ. ಹೆಗಡೆ (ಉತ್ತರ ಕನ್ನಡ), ತಿಪ್ಪೇಸ್ವಾಮಿ (ದಾವಣಗೆರೆ), ಎನ್. ಕಲಾವತಿ (ಚಿತ್ರದುರ್ಗ), ಎಸ್.ಎನ್. ಸ್ವಾಮಿ (ತುಮಕೂರು), ಟಿ.ಆರ್. ಸುನಿಲ್ (ಮೈಸೂರು), ಎಸ್. ಸುಮಾ (ಚಾಮರಾಜನಗರ), ಕೆ. ಹೇಮಾವತಿ (ಬೆಂಗಳೂರು ಗ್ರಾಮಾಂತರ), ಎಚ್.ಎಲ್. ನಿರ್ಮಲ (ಬೆಂಗಳೂರು ಉತ್ತರ), ಎಚ್.ಪಿ. ಶಿವಪ್ರಕಾಶ್ (ಬೆಂಗಳೂರು ಕೇಂದ್ರ) ಮತ್ತು ಷಣ್ಮುಗಂ (ಚಿಕ್ಕಬಳ್ಳಾಪುರ) ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.