ಬೆಂಗಳೂರು: ‘ನಗರ ಮತ್ತುಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಜನರ ಹಣ ಪೋಲಾಗುತ್ತಿದೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆ
ಸ್ವಾಮಿ ಬೇಸರ ವ್ಯಕ್ತಪಡಿಸಿದರು.

ನಗರದ ‘ಯುನೈಟೆಡ್ ಬೆಂಗಳೂರು’ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿವೆ. ಕಸ ನಿರ್ವಹಣೆ ಮಾಡುವಲ್ಲಿ ಪಾಲಿಕೆ ವಿಫಲವಾಗಿದೆ. ಜನರ ಹಣದಲ್ಲಿ ದೇಶ–ವಿದೇಶಗಳನ್ನೆಲ್ಲ ಸುತ್ತುವ ಅಧಿಕಾರಿಗಳು ಅಲ್ಲಿನ ಅಭಿವೃದ್ಧಿ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಮುಂದಾಗಿಲ್ಲ. ಕಸ ನಿರ್ವಹಣೆ ಮಾಡುವ ಮಾಫಿಯಾದ ಹಿಂದೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತು ಕೆಲವು ಸಚಿವರು ಇದ್ದಾರೆ’ ಎಂದು ಹೇಳಿದರು.

‘ಪಾಲಿಕೆಯ ವಾರ್ಡ್ ಕಮಿಟಿಗಳಲ್ಲಿ ತಮಗೆ ಬೇಕಾದವರನ್ನು ಮತ್ತು ಚೇಲಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ದೂರುಗಳು ಬರದಂತೆ ವ್ಯವಸ್ಥೆ ರೂಪಿಸಿಕೊಳ್ಳುತ್ತಾರೆ. ಹೀಗಿರುವಾಗ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗುತ್ತಿವೆ. ಕಾನೂನಿನನ್ವಯಅಭಿವೃದ್ಧಿ ಕಾರ್ಯಗಳು ಆಗಬೇಕು. ಆಗಿರುವ ಕೆಲಸದ ವಿವರಗಳನ್ನು ಅಧಿಕಾರಿಗಳು ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಶೇ 50ರಷ್ಟು ಪರಿಣಿತರು ಇರಲಿ: ‘ಪಾಲಿಕೆಯ ವಾರ್ಡ್ ಕಮಿಟಿಗಳಲ್ಲಿ ಪರಿಣಿತರು, ಎಂಜಿನಿಯರ್ಗಳು, ಒಳಚರಂಡಿ ವ್ಯವಸ್ಥೆ ಮತ್ತು ಪರಿಸರ ತಜ್ಞರು ಇರಬೇಕು. ಇನ್ನುಳಿದ ಶೇ 50ರಷ್ಟು ನಾಗರಿಕರ ಸಹಭಾಗಿತ್ವ ಇದ್ದಾಗ ಮಾತ್ರ ಬೆಂಗಳೂರಿನ ಅಭಿವೃದ್ಧಿ ಯೋಜನಾಬದ್ಧವಾಗಿ ನಡೆಯಲು ಸಾಧ್ಯ’ ಎಂದರು.

ನಾಗರಿಕ ಕೇಂದ್ರಿತ ಬಜೆಟ್:‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವ ಮುನ್ನ, ನಾಗರಿಕರನ್ನು ಭೇಟಿಯಾಗಿ ನಗರದ ಸಮಸ್ಯೆಗಳ ಕುರಿತು ಚರ್ಚಿಸಬೇಕು. ಅದಕ್ಕೆ ಪೂರಕವಾಗಿ ನಾಗರಿಕ ಕೇಂದ್ರಿತ ಬಜೆಟ್ ಮಂಡಿಸಬೇಕು’ ಎಂದರು.

‘ಸಿವಿಕ್ ಬೆಂಗಳೂರು’ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಮಾತನಾಡಿ, ‘ಸಂವಿಧಾನದ 74 ನೇ ತಿದ್ದುಪಡಿ ಪ್ರಕಾರ ಪ್ರತಿ ವಾರ್ಡ್ಗಳಲ್ಲೂ ಸಮಿತಿ ರಚನೆಯಾಗಬೇಕು ಎಂದರು.

‘ಸೋಮಸುಂದರ ಪಾಳ್ಯ ಕೆರೆ ಪಕ್ಕದಲ್ಲಿರುವ ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ (ಕೆಸಿಡಿಸಿ) ಸ್ಥಾವರದಿಂದ ಕುಡಿಯುವ ನೀರು ವಿಷಪೂರಿತವಾ ಗುತ್ತಿದ್ದು,ಉಸಿರಾಡಲು ಯೋಗ್ಯವಾದ ಗಾಳಿಯೂ ಇಲ್ಲದಂತಾಗಿದೆ’ ಎಂದು ಅಲ್ಲಿನನಿವಾಸಿಗಳು ಅಳಲುತೋಡಿಕೊಂಡರು.

ವಸತಿ ಪ್ರದೇಶಗಳ ವಾಣಿಜ್ಯೀಕರಣ,ಮೂಲಸೌಕರ್ಯ, ಘನ ತ್ಯಾಜ್ಯ ನಿರ್ವಹಣೆ,ಕೆರೆಗಳ ಪುನರುಜ್ಜೀವನ,ಬನ್ನೇರುಘಟ್ಟ ಪರಿಸರ- ಸೂಕ್ಷ್ಮ ವಲಯ ಕುರಿತ ಸಮಸ್ಯೆಗಳು,ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.