ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಸ ಸುರಿಯುವ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ತೆರವುಗೊಳಿಸಿ ಸುಂದರೀಕರಣಗೊಳಿಸುವ ‘ಪ್ರಾಜೆಕ್ಟ್ ಶಿವಾಜಿನಗರ’ (#Project Shivajinagar) ಅಭಿಯಾನಕ್ಕೆ ಶಾಸಕ ರಿಜ್ವಾನ್ ಅರ್ಷದ್ ಮತ್ತು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಶನಿವಾರ ಚಾಲನೆ ನೀಡಿದರು.

ಶಿವಾಜಿನಗರದಲ್ಲಿ ಪೊಲೀಸ್ ವಸತಿ ಸಮುಚ್ಚಯದ ಬಳಿ ಕಸ ಸುರಿಯುತ್ತಿದ್ದ ಕೆಲವು ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು. ಅವುಗಳ ಪಕ್ಕದ ಗೋಡೆಗೆ ಶಾಸಕ ಹಾಗೂ ಆಯುಕ್ತರು ಸೇರಿ ಸುಣ್ಣ–ಬಣ್ಣ ಬಳಿದರು.

ರಿಜ್ವಾನ್ ಅರ್ಷದ್, ‘ಶಿವಾಜಿನಗರದಲ್ಲಿ ಕಸ ಸಮಸ್ಯೆ ತೀವ್ರವಾಗಿದೆ. ಜನ ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ರಸ್ತೆ ಬದಿ ಕಸ ಬಿಸಾಡುವ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಈ ಕ್ಷೇತ್ರವನ್ನು ಕಸಮುಕ್ತಗೊಳಿಸಲು ಸ್ಥಳೀಯರ ಸಹಕಾರ ಅಗತ್ಯ’ ಎಂದರು.

ಎನ್.ಮಂಜುನಾಥ ಪ್ರಸಾದ್, ‘ಶಿವಾಜಿನಗರವನ್ನು ಸ್ವಚ್ಛ ಹಾಗೂ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ರೂಪಿಸುವುದು ಜನರ ಕೈಯಲ್ಲೇ ಇದೆ. ಕಸದ ರಾಶಿಗಳನ್ನು ತೆರವುಗೊಳಿಸಿ ಆ ಸ್ಥಳವನ್ನು ಸುಂದರೀಕರಿಸಿದ ಬಳಿಕ ಮತ್ತೆ ಅಲ್ಲಿ ಯಾರೂ ಕಸ ಸುರಿಯದಂತೆ ಸ್ಥಳೀಯರು ನೋಡಿಕೊಳ್ಳಬೇಕು. ಕಸ ಸಂಗ್ರಹಿಸಲು ಆಟೊಟಿಪ್ಪರ್‌ನಲ್ಲಿ ಮನೆ ಮನೆಗೆ ಬರುವ ಪಾಲಿಕೆ ಸಿಬ್ಬಂದಿಗೇ ಕಸವನ್ನು ನೀಡಬೇಕು. ಇದು ಎಲ್ಲರ ಸಾಮುದಾಯಿಕ ಜವಾಬ್ದಾರಿ. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದರೆ ಕಸದ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.