ಬೆಂಗಳೂರು: ಚಲಾವಣೆಯಿಂದ ನಿಷೇಧಿಸಲಾದಹಳೆ ನೋಟು ಬದಲಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ. ಚಾರ್ಜ್ ಹಾಗೂ ಮತ್ತಿತ್ತರ ಶಾಸಕರು ಭಾಗಿಯಾಗಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ಆರೋಪಿಸಿದರು.

‘ಬೆಂಗಳೂರು ಒನ್’ ಕೇಂದ್ರಗಳಲ್ಲಿ2016ರ ನವೆಂಬರ್ನಿಂದ 141 ದಿನಗಳಲ್ಲಿ ₹500, ₹1000 ಮುಖ ಬೆಲೆ ಹಳೆಯ ನೋಟುಗಳನ್ನು ಬದಲಾವಣೆಗೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು. ಈ ಕುರಿತು ರಮೇಶ್, ಶನಿವಾರ 235 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.

ನೂರಾರು ಕೋಟಿ ಹಣ ಬದಲಾವಣೆ ಹಗರಣದ ಬಗ್ಗೆ ಲೋಕಾಯುಕ್ತ, ಎಸಿಬಿ, ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವುದಾಗಿ ಅವರು ತಿಳಿಸಿದರು.

‘ಬೆಂಗಳೂರು ಒನ್’ನಲ್ಲಿ 96 ವಿವಿಧ ಇಲಾಖೆಗಳ ಸೇವೆ ಮತ್ತು ಹಣ ಪಾವತಿ ವ್ಯವಸ್ಥೆ ಇದೆ. ಹಾಗಾಗಿ, ಕಾಂಗ್ರೆಸ್ನ ಹಲವು ಮುಖಂಡರು ವ್ಯವಸ್ಥೆಯನ್ನು ದುಬರ್ಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.