ಬೆಂಗಳೂರು: ಸುಂಕದಕಟ್ಟೆಯ ಶಾಂತಿಧಾಮ ವಿದ್ಯಾಸಂಸ್ಥೆ ಶಾಲೆಯ ಮೆಟ್ಟಿಲು, ಗೋಡೆ ಹಾಗೂ ರಸ್ತೆ ಮೇಲೆ ‘ಸಾರಿ (ಕ್ಷಮಿಸಿ)’ ಎಂಬುದಾಗಿ 100ಕ್ಕೂ ಹೆಚ್ಚು ಬಾರಿ ಬರೆಯಲಾಗಿದ್ದು, ಈ ರೀತಿ ಮಾಡಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

‘ಶಾಲೆ ಬಳಿ ತಡರಾತ್ರಿ ಬಂದು ಹೋಗಿರುವ ಕಿಡಿಗೇಡಿಗಳು, ‘ಸಾರಿ’ ಎಂಬುದಾಗಿ ಬರೆದಿದ್ದಾರೆ. ನಸುಕಿನಲ್ಲಿ ವಾಯುವಿಹಾರಕ್ಕೆ ಹೊರಟಿದ್ದ ಸಾರ್ವಜನಿಕರು, ಬರಹಗಳನ್ನು ನೋಡಿ ಶಾಲೆ ಶಿಕ್ಷಕರು ಹಾಗೂ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಾರಿ’ ಎಂಬುದನ್ನು 100ಕ್ಕೂ ಹೆಚ್ಚು ಬಾರಿ ಇಂಗ್ಲಿಷ್ನಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಜೊತೆಗೆ, ಪ್ರೀತಿಯ ಸಂಕೇತವಾದ ಹೃದಯದ ಚಿತ್ರವನ್ನೂ ಕೆಲವೆಡೆ ಬಿಡಿಸಲಾಗಿದೆ. ಯಾರೋ ಪ್ರೇಮಿ ಈ ರೀತಿ ಮಾಡಿರುವ ಅನುಮಾನವಿದೆ. ಆತನ ಪತ್ತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.