ಬೆಂಗಳೂರು: ಸದಾಶಿವನಗರ ಸಂಚಾರ ಠಾಣೆ ವ್ಯಾಪ್ತಿಯ ನ್ಯೂಬಿಇಎಲ್ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ವೀಲಿಂಗ್ ಮಾಡುತ್ತಿದ್ದ ಆರೋಪದಡಿ ರಾಕೇಶ್ ಎಸ್ ಅಲಿಯಾಸ್ ಸೆಲ್ವರಾಜ್ ಎಸ್. (19) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕುವೆಂಪುನಗರದ ವಿ.ಕೆ. ಗೋಕಾಕ್ ರಸ್ತೆಯ ನಿವಾಸಿ ರಾಕೇಶ್ ಎಸ್., ದ್ವಿಚಕ್ರ ವಾಹನದಲ್ಲಿ (ಕೆಎ 51 ಎಚ್‌ಜೆ 9151) ವೀಲಿಂಗ್ ಮಾಡುತ್ತಿದ್ದರು. ಹೆಲ್ಮೆಟ್ ಸಹ ಹಾಕಿರಲಿಲ್ಲ. ಈ ದೃಶ್ಯವನ್ನು ಸೆರೆಹಿಡಿದಿದ್ದ ಸ್ಥಳೀಯರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. ಅದೇ ವಿಡಿಯೊ ಆಧರಿಸಿ ಆರೋಪಿಯನ್ನು ಬೈಕ್ ಸಮೇತ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.