ಬೆಂಗಳೂರು: ನ್ಯಾಯಾಂಗ, ಐಎಎಸ್, ಐಪಿಎಸ್ ಮತ್ತು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೋರಿಕೆ ಆಧರಿಸಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಅಲ್ಪಾವಧಿ ಟೆಂಡರ್ ಮೂಲಕ ತುರ್ತು ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನಂ.6ನೇ ಕಟ್ಟಡ ಉಪ ವಿಭಾಗದ ಅಧಿಕಾರಿಗಳು ಇಲಾಖಾ ಮುಖ್ಯಸ್ಥರಿಗೆ ಸ್ಪಷ್ಟನೆ ನೀಡಿದ್ದಾರೆ.

₹ 5 ಲಕ್ಷಕ್ಕಿಂತ ಕಡಿಮೆ ವೆಚ್ಚದ 1,000ಕ್ಕೂ ಹೆಚ್ಚು ಕಾಮಗಾರಿಗಳನ್ನು ಲಕೋಟೆ (ಮ್ಯಾನ್ಯುಯಲ್) ಪದ್ಧತಿಯಲ್ಲಿ ಟೆಂಡರ್ ನಡೆಸಿರುವ ಕುರಿತು ‘ಪ್ರಜಾವಾಣಿ’ಯ ಜನವರಿ 2ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ‘ತುಂಡು ಗುತ್ತಿಗೆ ದರ್ಬಾರ್’ ವರದಿ ಕುರಿತು ಸ್ಪಷ್ಟನೆ ನೀಡುವಂತೆ ಪಿಡಬ್ಲ್ಯುಡಿ ಕಾರ್ಯದರ್ಶಿ ಹಾಗೂ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಸೂಚಿಸಿದ್ದರು.

ಈ ಕುರಿತು ಜ. 4ರಂದು ಇಲಾಖಾ ಮುಖ್ಯಸ್ಥರಿಗೆ ನಾಲ್ಕು ಪುಟಗಳ ಸ್ಪಷ್ಟನೆ ನೀಡಿರುವ ನಂ. 6ನೇ ಕಟ್ಟಡಗಳ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಆರ್. ನಾರಪ್ಪ, ನಂ.2ನೇ ಕಟ್ಟಡಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಧನಂಜಯ ಮೂರ್ತಿ ಮತ್ತು ಬೆಂಗಳೂರು ಕಟ್ಟಡಗಳ ವೃತ್ತದ ಅಧೀಕ್ಷಕ ಎಂಜಿನಿಯರ್ ಶ್ರೀಧರಮೂರ್ತಿ, ‘ಯಾವುದೇ ತುಂಡು ಗುತ್ತಿಗೆ ನೀಡಿಲ್ಲ. ಕಾಮಗಾರಿಗಳ ಬಿಲ್ ಮೊತ್ತವನ್ನಷ್ಟೇ ವಿಭಜಿಸಿ ನೀಡಲಾಗಿದೆ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.