ಬೆಂಗಳೂರು: ಯುವಕನೊಬ್ಬನ ಮೊಬೈಲ್‌ನಲ್ಲಿ ಮಹಿಳೆಯರ 13 ಸಾವಿರ ನಗ್ನ ಫೋಟೊಗಳಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪ್ರಿಯಕರನ ಮೊಬೈಲ್‌ನಲ್ಲಿ ನನ್ನ ಹಾಗೂ ಸ್ನೇಹಿತೆ ಸೇರಿದಂತೆ ವಿವಿಧ ಮಹಿಳೆಯರ 13 ಸಾವಿರ ನಗ್ನ ಫೋಟೊಗಳಿವೆ’ ಎಂದು ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

‘ಕೆಲವು ದಿನಗಳ ಹಿಂದೆ ತನ್ನ ಪ್ರಿಯಕರನ ಮೊಬೈಲ್ ಗ್ಯಾಲರಿ ತೆರೆದೆ. ಅಲ್ಲಿ ಈ ಫೋಟೊಗಳನ್ನು ನೋಡಿದ್ದೇನೆ’ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ.

‘ಯುವತಿ ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಯುವಕನನ್ನು ಪ್ರೀತಿಸುತ್ತಿದ್ದರು. ಇಬ್ಬರು ಆತ್ಮೀಯ ಕ್ಷಣಗಳನ್ನು ಕಳೆದಿದ್ದರು. ಅದರ ದೃಶ್ಯ ಚಿತ್ರೀಕರಿಸಿಕೊಂಡಿದ್ದರು. ಅದನ್ನು ಅಳಿಸಲು ಮುಂದಾದ ವೇಳೆ ಈ ನಗ್ನ ಫೋಟೊಗಳು ಸಿಕ್ಕಿವೆ’ ಎಂದು ಪೊಲೀಸರು ಹೇಳಿದರು.

ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.