ಬೆಂಗಳೂರು: ಡಿಜಿಟಲ್ ಇಂಡಿಯಾ ಯೋಜನೆಯಡಿ ರಾಜ್ಯದ ವಿಧಾನಮಂಡಲ ಮತ್ತು ಶಾಸಕಾಂಗವನ್ನು ಸಂಪೂರ್ಣ ಡಿಜಿಟಲೀ
ಕರಣಗೊಳಿಸುವ ‘ಇ–ವಿಧಾನ ಅಪ್ಲಿಕೇಶನ್’ ಯೋಜನೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ.

ವಿಧಾನಮಂಡಲದ ಕಾರ್ಯ ಕಲಾಪವೂ ಸೇರಿದಂತೆ ಶಾಸಕಾಂಗದಲ್ಲಿ ಕಾಗದ ಬಳಕೆಯನ್ನು ಸಂಪೂರ್ಣ ನಿಲ್ಲಿಸಲಾಗುವುದು. ಈ ಸಂಬಂಧ ಸಚಿವಾಲಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಶುಕ್ರವಾರ ವಿಧಾನಸೌಧದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಅಧಿಕಾರಿಗಳು ಮಾಹಿತಿ ನೀಡಿದರು.

ಇ–ವಿಧಾನ ಯೋಜನೆಯನ್ನು ಹಿಮಾಚಲ ಪ್ರದೇಶ ರಾಜ್ಯವು ಮೊದಲ ಬಾರಿಗೆ ಅನುಷ್ಠಾನಗೊಳಿಸಿತ್ತು. ಅಲ್ಲಿ ಸಚಿವಾಲಯ ಮಾತ್ರವಲ್ಲದೆ, ವಿಧಾನಮಂಡಲ ಕಾರ್ಯಕಲಾಪವೂ ಕಾಗದ ರಹಿತವಾಗಿದೆ. ಇದರಿಂದ ಪ್ರೇರಣೆಗೊಂಡ ಕೇಂದ್ರ ಸರ್ಕಾರ ಲೋಕಸಭೆ, ರಾಜ್ಯಸಭೆ, ಕೇಂದ್ರಾಡಳಿತ ಪ್ರದೇಶ ಮತ್ತು ಎಲ್ಲ ರಾಜ್ಯಗಳಲ್ಲೂ ಜಾರಿಗೊಳಿಸಲು ಚಿಂತನೆ ನಡೆಸಿದ್ದು, ‘ಒನ್ ನೇಷನ್ ಒನ್ ಅಪ್ಲಿಕೇಷನ್’ ಅಡಿ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ.

ರಾಜ್ಯ ವಿಧಾನಮಂಡಲದಲ್ಲಿ ಇದನ್ನು ಜಾರಿಗೊಳಿಸಲು ವಿಧಾನ ಸಭಾಧ್ಯಕ್ಷ ಮತ್ತು ವಿಧಾನ ಪರಿಷತ್ ಸಭಾಪತಿಯವರು ಒಪ್ಪಿಗೆ ನೀಡಿದ್ದಾರೆ. ಶುಕ್ರವಾರ ನಡೆದ ಕಾರ್ಯಾಗಾರದಲ್ಲಿ ವಿಧಾನಮಂಡಲದ ಮಾಹಿತಿಯನ್ನು ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಹೇಗೆ ಒದಗಿಸಬೇಕು ಎಂಬ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.