ಬೆಂಗಳೂರು: ಬೆಂಗಳೂರು ಪ್ರೆಸ್‌ಕ್ಲಬ್ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 20 ಜನ ಪತ್ರಕರ್ತರಿಗೆ ‘2016–17ನೇ ಸಾಲಿನ ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪ್ರಶಸ್ತಿ ಪ್ರದಾನ ಮಾಡಿ, ‘ಮಾಧ್ಯಮಗಳು ಜನರಿಗೆ ಮಾರ್ಗದರ್ಶಕ ಗಳಿದ್ದಂತೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯ ನಿರ್ವಹಣೆಗೂ ಇವು ಸಹಕರಿಸುತ್ತಿವೆ. ಮಾಧ್ಯಮಗಳಿಂದ ರಚನಾತ್ಮಕ ಟೀಕೆ ಬಂದರೆ ತಪ್ಪು ತಿದ್ದಿಕೊಳ್ಳಬಹುದು. ಆರೋಪದ ಸುದ್ದಿಗಳನ್ನು ಮುಖಪುಟದಲ್ಲಿ ಹಾಕುತ್ತಿರಿ. ಅದೇ ವ್ಯಕ್ತಿ ಆರೋಪದಿಂದ ಮುಕ್ತವಾದಾಗ ಅಷ್ಟೇ ದೊಡ್ಡ ಸುದ್ದಿ ಮಾಡುವುದಿಲ್ಲ’ ಎಂದು ಹೇಳಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಜನರು ಹಾಗೂ ಪ್ರಭುತ್ವಕ್ಕೆ ಸೇತುವೆಯಾಗಿ ಮಾಧ್ಯಮಗಳಿವೆ. ಆದರೆ ವಾಹಿನಿಗಳ ಚರ್ಚೆಗಳು ಶಾಲಾ ಮಕ್ಕಳ ಚರ್ಚೆಗಳಂತೆ, ತೀರ್ಪು ನೀಡುವಂತೆ ನಡೆಯುತ್ತಿವೆ’ ಎಂದರು.

ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದ ಜೆಡಿಎಸ್ ಪಕ್ಷದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

‘ಪ್ರಜಾವಾಣಿ’ ಸಹ ಸಂಪಾದಕಿ ಸಿ.ಜಿ. ಮಂಜುಳಾ, ‘ಸುಧಾ’ ಸಹಾಯಕ ಸಂಪಾದಕ ಬಿ.ಎಂ. ಹನೀಫ್, ಹಿರಿಯ ಪತ್ರಕರ್ತ ಇ.ವಿ. ಸತ್ಯನಾರಾಯಣ ಸೇರಿದಂತೆ 20 ಜನ ಪತ್ರಕರ್ತರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಹಾವೇರಿ ಜಿಲ್ಲೆಯ ಜಯಮ್ಮ ನಿಂಗನಗೌಡ ಚನ್ನಗೌಡರ ಅವರಿಗೆ ‘ಕೃಷಿ ಸಾಧಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.