ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹಾಗೂ ಸಂಸದ ಭಗವಂತ ಖೂಬಾ ಅವರ ನಿರಂತರ ಪ್ರಯತ್ನದ ಫಲದಿಂದ ಔರಾದ್ ತಾಲ್ಲೂಕಿನ ಜನತೆಯ ಬೇಡಿಕೆಯಾಗಿದ್ದ ಔರಾದ್– ಬೀದರ್ ಹೆದ್ದಾರಿಗೆ ಶೀಘ್ರದಲ್ಲಿ ಚಾಲನೆ ದೊರಕಲಿದೆ.

ಔರಾದನಿಂದ ಬೀದರ್ವರೆಗಿನ 45 ಕಿ.ಮಿ.ರಸ್ತೆಗೆ ಭಾರತಮಾಲಾ ಪರಿ ಯೋಜನೆಯಡಿ ₹ 336.64 ಕೋಟಿ ಮೀಸಲಿರಿಸಲಾಗಿದೆ. ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ಹಾಗೂ ಐದು ವರ್ಷಗಳ ಕಾಲ ನಿರ್ವಹಣೆ ಮಾಡಲು ನಿಗದಿಪಡಿಸಲಾಗಿದೆ.

ರಸ್ತೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಸಚಿವ ಪ್ರಭು ಚವಾಣ್ ಹಾಗೂ ಸಂಸದ ಭಗವಂತ ಖೂಬಾ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಉಭಯ ನಾಯಕರ ಒತ್ತಾಸೆಗೆ ಮಣಿದು ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೆಂಡರ್ ಕರೆಯಲಾಗಿದೆ.

‘ಔರಾದ್ ತಾಲ್ಲೂಕು ಮತ್ತು ಬೀದರ್ ನಗರದ ಜನರ ಬೇಡಿಕೆಗೆ ಸ್ಪಂದಿಸಿ ಔರಾದ್-ಬೀದರ ರಸ್ತೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತೀನ್ ಗಡ್ಕರಿ ಹಾಗೂ ಕಾಮಗಾರಿಗಾಗಿ ಸತತ ಪ್ರಯತ್ನ ನಡೆಸಿದ ಸಂಸದ ಭಗವಂತ ಖೂಬಾ ಅವರಿಗೆ ತಾಲ್ಲೂಕಿನ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.