ಬೀದರ್: ಬೀದರ್ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಅಳಿಯ ಚಂದ್ರಾಸಿಂಗ್ ₹ 47.01 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿದ್ದಾರೆ. ಇಷ್ಟಿದ್ದರೂ ₹ 2 ಕೋಟಿ ಸಾಲ ಮಾಡಿದ್ದಾರೆ.

₹ 31. 11ಕೋಟಿ ಚಿರಾಸ್ತಿ ಹಾಗೂ ₹ 15.90 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಇವರ ಪತ್ನಿ ₹ 10.82 ಕೋಟಿ ಚರಾಸ್ತಿ ಹೊಂದಿದ್ದಾರೆ. ಚಂದ್ರಾಸಿಂಗ್ 5 ಕೆ.ಜಿ ಬೆಳ್ಳಿ, ಪತ್ನಿ 1ಕೆ.ಜಿ.ಚಿನ್ನ, 150 ಗ್ರಾಂ ಬೆಳ್ಳಿ ಆಭರಣ ಇಟ್ಟುಕೊಂಡಿದ್ದಾರೆ. ಪತ್ನಿಗೆ ₹ 1.5 ಕೋಟಿ ಸಾಲ ನೀಡಿದ್ದಾರೆ. ಚಂದ್ರಾಸಿಂಗ್ 2021-2022ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ ರಿಟರ್ನ್‌ನಲ್ಲಿ ತಮ್ಮ ಆದಾಯ ₹ 89,314 ಆದಾಯ ಹಾಗೂ ಪತ್ನಿ ಆದಾಯ ₹ 1,16,520 ಆದಾಯ ಇದೆ ಎಂದು ಉಲ್ಲೇಖಿಸಿದ್ದಾರೆ.

ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.