ಭಾಲ್ಕಿ ತಾಲ್ಲೂಕಿನ ಅಟ್ಟರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಜರಗಾ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿರುವ ಕಾಂಪೌಂಡ್ಹಾಗೂ ಬೂದು ನೀರು ನಿರ್ವಹಣ ಘಟಕ
ಬೀದರ್ ತಾಲ್ಲೂಕಿನ ಶ್ರೀಮಂಡಲ ಗ್ರಾಮ ಪಂಚಾಯಿತಿ ಕಚೇರಿ
ಮೂಲಸೌಕರ್ಯ ಕೊರತೆ
ಔರಾದ್: ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಜಂಬಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಾರ್ಡರ್ ತಾಂಡಾ ಡಾಕು ತಾಂಡಾ ಪೋಮಾ ತಾಂಡಾದಲ್ಲಿ ಕುಡಿಯುವ ನೀರು ಹಾಗೂ ಇತರೆ ಮೂಲ ಸೌಕರ್ಯಗಳ ಕೊರತೆ ಇದೆ. ಬಾರ್ಡರ್ ತಾಂಡಾ ಜನ ಮಳೆಗಾಲದಲ್ಲೂ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಜೆಜೆಎಂ ಕಾಮಗಾರಿ ಇನ್ನೂ ಪೂರ್ಣ ಆಗಿಲ್ಲ. ಇದರಿಂದ ನೀರಿನ ಸಮಸ್ಯೆ ಜತೆ ರಸ್ತೆ ಸಮಸ್ಯೆಯೂ ಇದೆ. ಕಸ ವಿಲೇವಾರಿ ವ್ಯವಸ್ಥೆ ಇದ್ದರೂ ಪೂರ್ಣ ವಿಲೇವಾರಿ ಆಗುತ್ತಿಲ್ಲ ಎಂಬುದು ಜಮಗಿ ನಿವಾಸಿಗಳ ಅಳಲು. ‘ಕಸ ವಿಲೇವಾರಿಗೆ ನಾವು ಮಾದರಿ. ವಾಹನ ಚಾಲನೆ ಸೇರಿದಂತೆ ಎಲ್ಲವೂ ಮಹಿಳೆಯರೇ ನೋಡಿಕೊಳ್ಳುತ್ತಾರೆ. ಕೆಲ ತಾಂಡಾ ಹೊರತುಪಡಿಸಿದರೆ ಎಲ್ಲ ಕಡೆ ನೀರು ಪೂರೈಕೆ ಸರ್ಮಪಕವಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯರು. ‘ಎಲ್ಲ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ. ಶೇ 80ರಷ್ಟು ಜನ ಶೌಚಾಲಯ ಬಳಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಹೈಟೆಕ್ ಗ್ರಂಥಾಲಯ ಮಾಡಿದ್ದೇವೆ. ಶುದ್ಧ ನೀರಿನ ಘಟಕವೂ ಬಳಕೆಯಾಗುತ್ತಿದೆ. ಇದನ್ನೆಲ್ಲ ಪರಿಗಣಿಸಿಯೇ ನಮ್ಮ ಪಂಚಾಯಿತಿಗೆ ಪ್ರಶಸ್ತಿ ಬಂದಿದೆ’ ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ ಪಿಡಿಒ ಶರಣಪ್ಪ ಗಾದಗೆ.
ಬಯಲು ಶೌಚ ಮುಕ್ತ ಪಂಚಾಯಿತಿ
ಹುಲಸೂರ: ತಾಲ್ಲೂಕಿನ ಅಟ್ಟರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮೂಲಸೌಕರ್ಯಗಳ ಅಭಿವೃದ್ಧಿ ಆಡಳಿತದಲ್ಲಿ ಸುಧಾರಣೆ ಹಾಗೂ ಸ್ವಚ್ಛತೆ ಸಾಧನೆಗಾಗಿ ಪ್ರಶಸ್ತಿ ಸಂದಿದೆ. ಒಟ್ಟು 967 ಕುಟುಂಬಗಳಿದ್ದು 3789ಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಪ್ರತಿ ಕುಟುಂಬವು ವೈಯುಕ್ತಿಕ ಶೌಚಾಲಯ ಹೊಂದಿದ್ದು ಎಲ್ಲರೂ ಬಳಸುತ್ತಿದ್ದಾರೆ. ಬಯಲು ಶೌಚಾಲಯ ಮುಕ್ತ ಪಂಚಾಯಿತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಗ್ರಾಮಸಭೆ ಸಾಮಾನ್ಯ ಸಭೆಯನ್ನು ನಿಗದಿತ ಸಮಯಕ್ಕೆ ನಡೆಸುವುದು ಅಭಿವೃದ್ಧಿ ಕಾಮಗಾರಿಗಳ ಪಾರದರ್ಶಕ ಬದು ನೀರು ನಿರ್ವಹಣೆ ನರೇಗಾ ಯೋಜನೆಯ ಉತ್ತಮ ಪ್ರಗತಿ ಗ್ರಾಮ ಆರೋಗ್ಯ ಯೋಜನೆ ಅಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಂದಾಯ ವಸೂಲಿ ಕುಡಿಯುವ ನೀರು ಪೂರೈಕೆ ವಸತಿ ಯೋಜನೆಗಳಲ್ಲಿ ಪಂಚಾಯಿತಿ ಉತ್ತಮ ಕೆಲಸ ಮಾಡಿದೆ. ಗ್ರಾಮ ಪಂಚಾಯಿತಿ ಯೋಜನೆಗಳು ಅಂಗನವಾಡಿ ಹಾಗೂ ಇತರೆ ವ್ಯವಹಾರದ ಸಮಗ್ರ ಮಾಹಿತಿಯನ್ನು ಪಂಚತಂತ್ರದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ. ಆನ್‌ಲೈನ್ ಮೂಲಕ ಹಣದ ವ್ಯವಹಾರ ಮಾಡಲಾಗುತ್ತಿದೆ. ‘ಗ್ರಾಮದ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರ ಮುಖ್ಯ. ಪ್ರಶಸ್ತಿ ಸಂತಸ ತಂದಿದೆ. ಸರ್ಕಾರದ ಎಲ್ಲ ಸೌಲಭ್ಯಗಳು ಸದ್ಬಳಕೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷೆ ಸುನೀತಾ ಮಾಧವ ಲಾಡೇ.
ಆಡಳಿತದಲ್ಲಿ ಸುಧಾರಣೆ
ಹುಮನಾಬಾದ್: ತಾಲ್ಲೂಕಿನ ಕಲ್ಲೂರ್ ಗ್ರಾಮ ಪಂಚಾಯಿತಿ ಲಭ್ಯವಿರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿ ಗಮನ ಸೆಳೆದಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ ಆಡಳಿತದಲ್ಲಿ ಸುಧಾರಣೆ ಹಾಗೂ ಸ್ವಚ್ಛತೆಯಲ್ಲಿ ಉತ್ತಮ ಸಾಧನೆ ತೋರಿದೆ. ಪಂಚಾಯಿತಿ ವ್ಯಾಪ್ತಿಯ ಕಠಳ್ಳಿ ಬೋರಂಪಳ್ಳಿ ಕಲ್ಲೂರ್ ತಾಂಡಾದಲ್ಲಿ ಮೂಲ ಸೌಕರ್ಯ ಕಸ ನಿರ್ವಹಣೆ ಕಾಲಕಾಲಕ್ಕೆ ಗ್ರಾಮಸಭೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಅನುದಾನ ಬಳಕೆ ದಾಖಲಾತಿ ನಿರ್ವಹಣೆ ಸ್ವಸಹಾಯ ಸಂಘಗಳಿಗೆ ಸಹಾಯ ಹಸ್ತ ರಸ್ತೆ ಬದಿ ಗಿಡ ನೆಡುವುದು ಚರಂಡಿಗಳ ಸ್ವಚ್ಛತೆ ರಸ್ತೆಗಳು ನಿರ್ಮಾಣ ರೈತರ ಹೊಲಗಳಲ್ಲಿ ದನದ ಕೊಟ್ಟಿಗೆ ಕುರಿ ಕೊಟ್ಟಿಗೆ ಕೃಷಿ ಹೊಂಡ ಬದು ನಿರ್ಮಾಣ ಎಸ್ಸಿ ಎಸ್ಟಿ ಮತ್ತು ಅಂಗವಿಕಲರಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಕೆಲಸಗಳಾಗಿವೆ. ‘ಸರ್ಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಪ್ರಶಸ್ತಿ ಬಂದಿರುವುದಕ್ಕೆ ಸಂತಸವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಗಿರೀಶ್ ತಿಳಿಸಿದರು.