ಈಗಾಗಲೇ ಜಂಗಲ್ ಕಟಿಂಗ್ ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ನಮ್ಮ ಗಮನಕ್ಕೆ ಬಾರದ ಸಮಸ್ಯೆಗಳು ಇದ್ದರೆ ಅವುಗಳನ್ನು ಪತ್ತೆಮಾಡಿ ಆದಷ್ಟು ಬೇಗ ಪರಿಹರಿಸಲಾಗುವುದುಗಣಪತಿ ಮೈನಾಳೆ ಜೆಸ್ಕಾಂ ಎಇಇ ಹುಲಸೂರ
ನನ್ನ ಹೊಲದಲ್ಲಿ ವಿದ್ಯುತ್ ಕಂಬ ಶಿಥಿಲವಾಗಿದೆ. ತಂತಿಗಳು ಕೈಗೆ ತಾಕುವಷ್ಟು ಜೋತುಬಿದ್ದಿವೆ. ಉಳುಮೆ ಮಾಡಲಾದ ಸ್ಥಿತಿಯಿದೆ. ನಾವೇ ಕಟ್ಟಿಗೆ ಮೂಲಕ ತಂತಿಗಳು ತಾಕದಂತೆ ಮೇಲೆತ್ತಿ ನಿಲ್ಲಿಸಿದ್ದೇವೆಶಿವಾಜಿ ನಾರಾಯಣ ಗಿರಿ ರೈತ ಹುಲಸೂರ
ಬಳ್ಳಿಗಳು ಬೆಳೆದು ವಿದ್ಯುತ್ ಕಂಬಗಳನ್ನು ಆವರಿಸಿವೆ. ಲೈನ್ ಮೇಲೆ ಮರಗಳ ಟೊಂಗೆಗಳು ಚಾಚಿವೆ. ಇದರಿಂದ ಗ್ರಾಮೀಣ ಭಾಗಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲಆಕಾಶ ಖಂಡಾಳೇ ಸಾಮಾಜಿಕ ಕಾರ್ಯಕರ್ತ
ಕಡಿದು ಬಿದ್ದ ಜೋತು ಬಿದ್ದ ವಿದ್ಯುತ್ ತಂತಿಯಿಂದ ಹೊಲಗಳಲ್ಲಿ ಜಿಂಕೆ ಇತರೆ ಜಾನುವಾರುಗಳಿಗೆ ಅವಘಡ ಸಂಭವಿಸಿದರೆ ಯಾರು ಹೊಣೆ? ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮವಹಿಸಬೇಕುಸಿದ್ರಾಮ ಕಾಮಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.