ಹುಮನಾಬಾದ್: ತಾಲ್ಲೂಕಿನ ಕನಕಟ್ಟಾ ಗ್ರಾಮದ ಹಿರಿಯ ರೈತ ವಿಠಲ್ ಸಿಂದಬಂದಗೆ ಅವರು ಕನಕಟ್ಟಾದ ಹೊರವಲಯದಲ್ಲಿ ಇರುವ ತಮ್ಮ 15 ಎಕರೆ ಕೃಷಿ ಭೂಮಿಯಲ್ಲಿ ಚಂದನ (ಶ್ರೀಗಂಧ) ಹೆಬ್ಬೇವು ಗಿಡಗಳನ್ನು ಬೆಳೆಸಿ ತಾಲ್ಲೂಕಿನ ಒಬ್ಬ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ.

1978ರಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿದ ವಿಠಲ್ ಅವರು ಸರ್ಕಾರಿ ಕೆಲಸಕ್ಕೆ ಮೊರೆ ಹೋಗದೇ 40 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ತಮ್ಮ 15 ಎಕರೆ ಜಮೀನಿನಲ್ಲಿ ₹ 12 ಲಕ್ಷ ವೆಚ್ಚದಲ್ಲಿ ಸಮೃದ್ಧ ಚಂದನ, ಹೆಬ್ಬೇವು ಬೆಳೆಯುವುದರ ಜೊತೆಗೆ ಮಿಶ್ರ ತಳಿ, ಶುಂಠಿ ಮತ್ತು ತೊಗರಿ ಕೂಡು ಬೆಳೆಸಿದ್ದಾರೆ.

‘1980ರಲ್ಲಿ ಸರ್ಕಾರಿ ನೌಕರಿ ಬಂದರೂ ನಾನು ಕೆಲಸಕ್ಕೆ ಹೋಗಲಿಲ್ಲ. ಕೃಷಿ ಚಟುವಟಿಕೆಯಲ್ಲಿ ತೊಡಗುವ ಆಸೆ ಇತ್ತು. ಅದಕ್ಕೆ 40 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ನನ್ನ 15 ಎಕರೆ ಜಮೀನಿನಲ್ಲಿ 7,500 ಚಂದನ ( ಶ್ರೀಗಂಧ) ಮತ್ತು 7500 ಹೆಬ್ಬೇವು ಗಿಡಗಳು ನೆಟ್ಟು ಹನಿ ನೀರಾವರಿ ಬಳಸಿ ಪೋಷಿಸುತ್ತಿದ್ದೇನೆ. ಉತ್ತಮ ರೀತಿಯಲ್ಲಿ ಚಂದನ ಮತ್ತು ಹೆಬ್ಬೇವು ಬೆಳೆದಿರುವೆ’ ಎಂದು ರೈತ ವಿಠಲ್ ಸಿಂದಬಂದಗೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೇಗಿಲ ಕುಂಟಿ ಹೊಡೆದ ನಂತರ ಸಾವಯವ ಗೊಬ್ಬರ ಸಿಂಪಡಿಸಿ, ಚಂದನ, ಹೆಬ್ಬೇವು ಗಿಡ ನೆಟ್ಟಿದ ಮರು ದಿನದಿಂದ ದಿನಕ್ಕೊಮ್ಮೆ ಶುದ್ಧ ರಸಗೊಬ್ಬರ, ಜಿಂಕ್ ಸಿಂಪಡಿಸಿ ನೀರು ಹರಿಸಬೇಕು. ಒಂದು ಗಿಡಕ್ಕೆ 8 ಅಡಿ ಅಗಲ ಮತ್ತು 4 ಅಡಿ ಉದ್ದ ಅಂತರದಲ್ಲಿ ಚಂದನ ಮತ್ತು ಹೆಬ್ಬೇವು ನಾಟಿ ಮಾಡಲಾಗಿದೆ. 12 ವರ್ಷಕ್ಕೆ ಚಂದನ (ಶ್ರೀಗಂಧ) ಬರುತ್ತೆ. ಮಾರುಕಟ್ಟೆಯಲ್ಲಿ ಶ್ರೀಗಂಧ (ಚಂದನ) ಕೆಜಿಗೆ ₹ 9 ಸಾವಿರಕ್ಕೆ ಮಾರಾಟವಾದರೆ, ಹೆಬ್ಬೇವು 1 ಟನ್ಗೆ ₹ 15 ಸಾವಿರದಂತೆ ಮಾರಾಟ ವಾಗುತ್ತಿದೆ. ನಾವು ಬೆಳೆಸುತ್ತಿರುವ ಚಂದನ ಮತ್ತು ಹೆಬ್ಬೇವು ಸೇರಿ ಒಟ್ಟು 15 ಸಾವಿರ ಗಿಡಗಳಿಂದ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.