ಬೀದರ್: ಬ್ರಿಮ್ಸ್ ಬೋಧಕ ಆಸ್ಪತ್ರೆ ಸಮೀಪದ ಕೋವಿಡ್ ಆಸ್ಪತ್ರೆಯಲ್ಲಿ ₹15 ಲಕ್ಷ ಮೌಲ್ಯದ ಎರಡು ವೆಂಟಿಲೇಟರ್ ಕಳವು ಆಗಿದೆ.

ನಾಲ್ಕು ದಿನಗಳ ಹಿಂದೆ ಆಸ್ಪತ್ರೆಯ ಕೊಠಡಿಯಲ್ಲಿ ಗಣ್ಯರೊಬ್ಬರ ಪತ್ನಿಗೆ ವೆಂಟಿಲೇಟರ್ ಅಳವಡಿಸಲು ಇಡಲಾಗಿತ್ತು. ಅವರು ಖಾಸಗಿ ಆಸ್ಪತ್ರೆಗೆ ದಾಖಲಾದ ಕಾರಣ ಕೋವಿಡ್ ಆಸ್ಪತ್ರೆಗೆ ಬಂದಿರಲಿಲ್ಲ. ಮಂಗಳವಾರ ಆಸ್ಪತ್ರೆಯ ಸಿಬ್ಬಂದಿ ಕೊಠಡಿಯೊಳಗೆ ಹೋದಾಗ ಕಿಟಕಿಯ ಗಾಜು ಒಡೆದು, ವೆಂಟಿಲೇಟರ್ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ಹಿಂಬದಿಯ ಬಾಗಿಲ ಸಮೀಪ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಕಳ್ಳರು ಅದನ್ನು ಹಾಳು ಮಾಡಿದ್ದಾರೆ.

ಬ್ರಿಮ್ಸ್ ಆಧಿಕಾರಿಗಳು ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಪ್ರಕ್ರಿಯೆ ಆರಂಭಗೊಂಡಿದೆ.

‘ಆಸ್ಪತ್ರೆ ಹಿಂಬದಿಯಿಂದ ಕಳ್ಳರು ದೊಡ್ಡ ಕಿಟಕಿ ಗಾಜು ಒಡೆದು ವೆಂಟಿಲೇಟರ್ ಕಳವು ಮಾಡಿದ್ದಾರೆ. ತಾಂತ್ರಿಕ ಮತ್ತು ನರ್ಸಿಂಗ್ ಸಿಬ್ಬಂದಿಯ ವಿಚಾರಣೆ ನಡೆದಿದೆ’ ಎಂದು ಬ್ರಿಮ್ಸ್ ಆಸ್ಪತ್ರೆ ವೈದಕೀಯ ಅಧೀಕ್ಷಕ ಡಾ.ಶಿವಕುಮಾರ ಶೆಟಕಾರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.