ಹನೂರು: ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಣಾಮ ಸಣ್ಣ ಈರುಳ್ಳಿ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸಣ್ಣ ಈರುಳ್ಳಿ ಬೆಳೆಯಲು ಮಾಡಿರುವ ಖರ್ಚೂ ಕೈಸೇರದಂತಹ ಪರಿಸ್ಥಿತಿಯಲ್ಲಿ ಸಿಲುಕಿರುವ ತಾಲ್ಲೂಕಿನ ಹಲವು ರೈತರು ಕಟಾವಿಗೆ ಬಂದಿರುವ ಫಸಲನ್ನು ಜಮೀನಿನಲ್ಲೇ ಉಳುಮೆ ಮಾಡಲು ಮುಂದಾಗುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುತ್ತಿದ್ದರಿಂದ ಈ ಬಾರಿ ತಾಲ್ಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸಣ್ಣ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಆದರೆ, ರೈತರ ಲೆಕ್ಕಾಚಾರಗಳು ತಲೆಕೆಳಗಾಗಿವೆ. ದರ ಕುಸಿತ ರೈತನ ಕಣ್ಣಲ್ಲಿ ನೀರು ಸುರಿಯುವಂತೆ ಮಾಡಿದೆ.

ಉಳುಮೆಗೆ ಮುಂದಾದ ರೈತರು: ಇಳುವರಿ ಹಾಗೂ ಬೆಲೆ ಕುಸಿತದಿಂದ ಬೇಸತ್ತಿರುವ ರೈತರು ಜಮೀನಿನಲ್ಲಿರುವ ಈರುಳ್ಳಿ ಕೀಳದೆ ಜಮೀನಿನಲ್ಲಿ ಹಾಗೆಯೇ ಕೊಳೆಯಲು ಬಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಲಾಭದ ಮಾತಿರಲಿ, ಖರ್ಚು ಮಾಡಿದ ಹಣವೂ ಸಿಗುವುದಿಲ್ಲ. ಈಗಿರುವ ಬೆಲೆಯಲ್ಲಿ ಕಟಾವು ಮಾಡಿ ಮಾರಾಟ ಮಾಡಿದರೆ ಸಾಲದ ಹೊರೆ ಹೆಚ್ಚಾಗಲಿದ್ದು, ಹಾಗಾಗಿ ಜಮೀನಿನಲ್ಲಿಯೇ ಉಳುಮೆ ಮಾಡಿ ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿದ್ದೇವೆ ಎನ್ನುತ್ತಾರೆ ರೈತರು.

ಅಲ್ಪಸ್ವಲ್ಪ ಜಮೀನಿನಲ್ಲಿ ಸಾಲ ಮಾಡಿ ಸಣ್ಣ ಈರುಳ್ಳಿ ಬೆಳೆದಿದ್ದ ರೈತರು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಕಟಾವಿಗೆ ಬಂದಿರುವ ಈರುಳ್ಳಿಯನ್ನು ಖರೀದಿಸಲು ವ್ಯಾಪಾರಿಗಳು ಹೆಚ್ಚು ಆಸಕ್ತಿ ತೋರದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಉತ್ತಮ ದರ ದೊರೆತು ಆದಾಯ ನೋಡಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಈರುಳ್ಳಿ ಬೆಳೆಯಲು ಸಾಲ ಮಾಡಿದ್ದ ರೈತರ ಸಾಲದ ಹೊರೆ ದರ ಕುಸಿತದಿಂದ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಬೆಲೆ ಕುಸಿತ ಒಂದೆಡೆಯಾದರೆ ಮಧ್ಯವರ್ತಿಗಳು ತೀರಾ ಕಡಿಮೆ ದರಕ್ಕೆ ಈರುಳ್ಳಿಯನ್ನು ಖರೀದಿಗೆ ಕೇಳುತ್ತಿದ್ದಾರೆ. ಅವರು ಕೇಳುವ ಬೆಳೆಗೆ ಕಟಾವು ಖರ್ಚೂ ಸಿಗುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರು.

ಕಳಪೆ ಬಿತ್ತನೆ ಬೀಜ: ತಾಲ್ಲೂಕಿನಲ್ಲಿ ಈ ಬಾರಿ ಸಣ್ಣ ಈರುಳ್ಳಿ ಬಿತ್ತನೆ ಬೀಜ ಗುಣಮಟ್ಟ ಕುಸಿತವಾಗಿರುವುದರಿಂದ ಇಳುವರಿಯೂ ಕಡಿಮೆಯಗಿದೆ ಎಂದು ದುರುತ್ತಾರೆ ಹಲವರು ರೈತರು. ಕೃಷಿ ಇಲಾಖೆ ಬಿತ್ತನೆ ಬೀಜ ಹಾಗೂ ಕಳಪೆ ಬೀಜದ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡದಿರುವುದು ಸಮಸ್ಯೆಗೆ ಕಾರಣ ಎನ್ನುತ್ತಾರೆ.

‘ಮಳೆ ಬಂದರೆ ಬೀದಿಗೆ ಬಿಸಾಡಬೇಕು’

ಪ್ರತಿ ಕೆಜಿಗೆ ₹ 50 ರಿಂದ ₹ 60 ಬೆಲೆ ಸಿಕ್ಕರೆ ಲಾಭ ಕಾಣಬಹುದು. ಆದರೆ ಈ ಬಾರಿ ಕೆಜಿಗೆ 25ಕ್ಕೂ ಕೇಳುವವರು ಇಲ್ಲದಂತಾಗಿದೆ. ಸಾಮಾನ್ಯವಾಗಿ ಸಣ್ಣ ಈರುಳ್ಳಿ ಹೆಚ್ಚಿನ ಪ್ರಮಾಣ ತಮಿಳುನಾಡಿಗೆ ಕಳುಹಿಸುತ್ತೇವೆ. ಆದರೆ ಬೇಡಿಕೆ ಕುಸಿದಿರುವುದರಿಂದ ಮಧ್ಯವರ್ತಿಗಳು ಖರೀದಿಗೆ ಉತ್ಸಾಹ ತೋರುತ್ತಿಲ್ಲ. ಎಪಿಎಂಸಿ ಅಧಿಕಾರಿಗಳು ರೈತರಿಂದ ನೇರವಾಗಿ ಈರುಳ್ಳಿ ಖರೀದಿಸಿದರೆ ನೆರವಾಗಲಿದೆ ಎನ್ನುತ್ತಾರೆ ರೈತರು.

ಗುತ್ತಿಗೆಗೆ 4 ಏಕರೆ ಜಮೀನು ಪಡೆದು ಒಂದೂವರೆ ಎಕರೆ ಈರುಳ್ಳಿ ಬೆಳೆದಿದ್ದು ಬೆಲೆ ಕುಸಿತಿದಂದ ದೊಡ್ಡ ನಷ್ಟವಾಗಿದೆ. ಹಾಕಿದ ಬಂಡವಾಳವೂ ಸಿಗದಂತಾಗಿದೆ.
–ಶಿವಣ್ಣ. ಅಜ್ಜೀಪುರ

ಸಣ್ಣ ಈರುಳ್ಳಿ ಬೆಳೆದು ಕಟಾವು ಮಾಡಿ ರಾಶಿ ಹಾಕಿ ವಾರವಾಯಿತು. ಈಗ ಮಾರಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಮಳೆ ಬಂದರೆ ಎಲ್ಲವನ್ನು ಬೀದಿಗೆ ಬಿಸಾಡಬೇಕಾಗುತ್ತದೆ.
–ರಾಜಪ್ಪ, ಕಣ್ಣೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.