ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಜನರು ಮಣ್ಣಿನಮಡಿಕೆಗಳನ್ಮು ಖರೀದಿ ಮಾಡುತ್ತಿರುವುದು
ವಿಶೇಷ ಪ್ಯಾಕೇಜ್ ಘೋಷಿಸಿ
ಡಿಸೆಂಬರ್‌ನಿಂದ ಮೇ ವರೆಗೆ ಮಾತ್ರ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಇರುತ್ತದೆ. ಮಾಸಿಕ ₹6 ಸಾವಿರ ಲಾಭ ಬರುತ್ತದೆ. ಉಳಿದ ಸಮಯದಲ್ಲಿ ಲಾಭ ಗೌಣ. ಸರ್ಕಾರ ಸಮುದಾಯವರ ಉಳಿವಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎನ್ನುತ್ತಾರೆ ನಲ್ಲಪರೆಡ್ಡಿಪಲ್ಲಿಯ ಶಿವಪ್ಪ–ವೆಂಕಟರಾಮಪ್ಪ ಸಹೋದರರು. ಇಂದಿನ ಪೀಳಿಗೆಯ ನಮ್ಮ ಮಕ್ಕಳು ಮಡಿಕೆ ತಯಾರು ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ಕುಂಬಾರಿಕೆ ಸಂಪೂರ್ಣ ಕಣ್ಮರೆಯಾಗಲಿದೆ ಎನ್ನುತ್ತಾರೆ ಅವರು. ಕುಂಬಾರಿಕೆ ಮಾಡುವವರ ಆರ್ಥಿಕ ಸ್ಥಿತಿ ನೋಡಿ ಅದೇ ಸಮುದಾಯದವರು ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ನಗರ ಪಟ್ಟಣದಲ್ಲಿ ಉದ್ಯೋಗ ಮಾಡುವವರನ್ನು ಹುಡುಕುತ್ತಿದ್ದಾರೆ. ಇದರಿಂದ ಕುಂಬಾರರಿಕೆ ಮಾಡುವ ಯುವಕರು ವಧುವಿಗಾಗಿ ಪರದಾಡುವಂತಾಗಿದೆ ಎನ್ನುತ್ತಾರೆ ಸಮುದಾಯ ಮುಖಂಡರು.