ಬಾಗೇಪಲ್ಲಿ: ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ಮಟ್ಟ, ಪರಿಸರದ ಕಾಳಜಿ, ಚಟುವಟಿಕೆಗಳಲ್ಲಿ ಭಾಗಿಯಾಗಿಸಿ, ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕ, ಶಿಕ್ಷಕಿಯರ ಮೇಲೆ ಇದೆ.

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಡ್ಲವಾರಿಪಲ್ಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಶಿಕ್ಷಕಿಯರ ಕಾಳಜಿಯಿಂದ ಸರ್ಕಾರಿ ಶಾಲೆಯ ಕಟ್ಟಡ, ಆವರಣದಲ್ಲಿನ ಪರಿಸರ, ಸ್ವಚ್ಛತೆಯ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಗಳ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ಕಲಿಕಾ ಮಟ್ಟವನ್ನು ಹೆಚ್ಚಿಸಿದ್ದಾರೆ.

ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ಹಾಗೂ ಕ್ಲಸ್ಟರ್ ವ್ಯಾಪ್ತಿಯಲ್ಲಿ ಸಡ್ಲವಾರಿಪಲ್ಲಿ ಗ್ರಾಮ ಇದೆ. ಗ್ರಾಮದಲ್ಲಿ 40ಕ್ಕೂ ಹೆಚ್ಚು ಕುಟುಂಬ ಇವೆ. ಪರಿಶಿಷ್ಟ ಜಾತಿ, ಪಂಗಡದವರು ಇದ್ದಾರೆ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 18 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಈ ಹಿಂದೆ ಶಾಲೆಗೆ ಕಾಂಪೌಂಡ್ ಇಲ್ಲದೇ ದನಕರುಗಳನ್ನು ಶಾಲೆಯ ಆವರಣದಲ್ಲಿ ಕಟ್ಟುತ್ತಿದ್ದರು. ಚರಂಡಿ ನೀರು ಹರಿದು ಸ್ವಚ್ಛತೆ ಇರುತ್ತಿರಲಿಲ್ಲ. ಸಿ.ಮುನಿರಾಜು ಎಂಬ ಶಿಕ್ಷಕ ಶಾಲೆಗೆ ಬಂದಾಗ ಗ್ರಾಮಸ್ಥರೊಡನೆ ಚರ್ಚಿಸಿ, ಶಾಲೆಯಲ್ಲಿ ಹಾಗೂ ಆವರಣವನ್ನು ಸ್ವಚ್ಛವಾಗಿ ಇಡಲು ಪೋಷಕರ ಸಭೆ ಮಾಡಿ ಸಹಕಾರ ಕೋರಿದ್ದಾರೆ. ನಂತರ ಗ್ರಾಮಸ್ಥರು, ಶಾಲಾ ಮಕ್ಕಳು ಸೇರಿ ಶಾಲಾವರಣವನ್ನು ಸ್ವಚ್ಛತೆ ಮಾಡಿದ್ದಾರೆ. 2018-19ನೇ ಶೈಕ್ಷಣಿಕ ವರ್ಷದಲ್ಲಿ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ತಮ್ಮ ಮಕ್ಕಳ ವರ್ಗಾವಣಾ ಪ್ರಮಾಣ ಪತ್ರ ಪಡೆದು, ಗ್ರಾಮದ ಸರ್ಕಾರಿ ಶಾಲೆಗೆ ದಾಖಲು ಮಾಡಿದರು. 6 ಮಕ್ಕಳು ಇದ್ದ ಶಾಲೆಯಲ್ಲಿ 25 ಮಂದಿ ವಿದ್ಯಾರ್ಥಿಗಳು ಶಾಲೆಗೆ ದಾಖಲಾದರು.

ಶಾಲಾ ಪರಿಸರವನ್ನು ಉತ್ತಮ ಮಾಡಲು ಅಂದಿನ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ದೇವರಗುಡಿಪಲ್ಲಿಯ ಸರಸ್ವತಮ್ಮ ಶಾಲೆಗೆ ಕಾಂಪೌಂಡ್ ಹಾಕಿಸಿದರು. ನಂತರ ಎಸ್ಎಸ್ಎ ಅನುದಾನದಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ ನಿರ್ಮಿಸಲಾಗಿದೆ. ಮಳೆಯಿಂದ ಸೋರುವ ಕೊಠಡಿಗಳನ್ನು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಶಾಲಾ ಕೊಠಡಿಗಳ ದುರಸ್ತಿ ಹಾಗೂ ನೆಲಹಾಸಿಗೆ ಟೈಲ್ಸ್ ಹಾಕಿಸಲಾಗಿದೆ.

ಪ್ರತಿದಿನ ಪ್ರಾರ್ಥನೆ, ಧ್ಯಾನ, ಸರಳ ವ್ಯಾಯಾಮ, ಚಟುವಟಿಕೆ ಆಧಾರಿತ ಕಲಿಕೆ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ನವೋದಯ, ಆದರ್ಶ ಶಾಲೆ, ಮೊರಾರ್ಜಿ ಶಾಲೆಗಳಿಗೆ 14 ಮಂದಿ ಆಯ್ಕೆಯಾಗಿದ್ದಾರೆ. ಶಾಲೆಯ ಶಿಕ್ಷಕ ಸಿ.ಮುನಿರಾಜು, ಶಿಕ್ಷಕಿ ಸುಮಾ ಮಾರ್ಗದರ್ಶನದಲ್ಲಿ ನಲಿ-ಕಲಿ, ಭೂಪಟ, ಪ್ರಾಣಿ, ಪಕ್ಷಿಗಳ, ತರಕಾರಿ, ಹೂವುಗಳ, ಅಲಂಕೃತ, ಇನಸಾಟ್ ಉಪಗ್ರಹ, ಕರ ಕುಶಲಗಳ ತರಬೇತಿನು ನೀಡಿದ್ದಾರೆ.

ಗ್ರಾಮದ ಹಿರಿಯರಾದ ನಾರಾಯಣರೆಡ್ಡಿ ಪ್ರೊಜೆಕ್ಟರ್ ದಾನ ನೀಡಿದ್ದಾರೆ. ತಾಲ್ಲೂಕು, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಧರಿಸಿದ ಕಾಂತಾರ ವೇಷಕ್ಕೆ ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ, ಚಂದ್ರಾಯಾನ 2ಕ್ಕೆ ತಾಲ್ಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಸಿಕ್ಕಿದೆ.

2023-24ನೇ ಸಾಲಿನಲ್ಲಿ ದಾಖಲಾತಿ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳ ಹಾಗೂ ಶಾಲಾ ಅಭಿವೃದ್ಧಿ, ಗುಣಾತ್ಮಕ ಶಿಕ್ಷಣದ ಬೋಧನೆಗೆ ಶಾಲೆಯ ಶಿಕ್ಷಕ ಸಿ.ಮುನಿರಾಜು ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಕೊರೊನಾ ಸೋಂಕಿನ ಅವಧಿಯಲ್ಲಿ ಮಕ್ಕಳಿಗೆ ಆನ್ಲೈನ್ ಮೂಲಕ ಬೋಧನೆ ಮಾಡಿದ್ದಕ್ಕೆ ರೋಲ್ ಮಾಡಲ್ ಶಾಲೆ ಪ್ರಶಸ್ತಿ ಬಂದಿದೆ.

ಮಕ್ಕಳಿಗೆ ಉತ್ತಮ ಶಿಕ್ಷಣ, ಪರಿಸರದ ಕಾಳಜಿ, ಶಿಸ್ತನ್ನು ಕಲಿಸಿದ್ದೇವೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧನೆ ಮಾಡುವ ಶಿಕ್ಷಕ, ಶಿಕ್ಷಕಿಯರು ಇದ್ದಾರೆ ಎಂದು ಶಾಲಾ ಶಿಕ್ಷಕ ಸಿ.ಮುನಿರಾಜು ತಿಳಿಸಿದರು.

ಎಲ್ಲಾ ಶಿಕ್ಷಕ, ಶಿಕ್ಷಕಿಯರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲಾ ಅಭಿವೃದ್ಧಿಗೆ ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಅವಶ್ಯಕ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ‘ಪ್ರಜಾವಾಣಿ’ ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.