ಮೂಡಿಗೆರೆ: ಟೀಮ್ ಮೆಜೆಸ್ಟಿಕ್ ಮೂಡಿಗೆರೆ ತಂಡದ ವತಿಯಿಂದ ಶನಿವಾರ ಪಟ್ಟಣದ ರಾಜೀವ್ ಲೇಔಟ್ ನಲ್ಲಿ ಏರ್ಪಡಿಸಿದ್ದ ಡರ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಸ್ಪರ್ಧಿಗಳು ದೂಳೆಬ್ಬಿಸಿ ಮೈ ನವಿರೇಳಿಸಿದರು.

ರಾಜೀವ್ ಲೇ ಔಟ್‌ನಲ್ಲಿ ಸಿದ್ಧಪಡಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ವಿವಿಧ ರಾಜಕೀಯ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಏಕಕಾಲದಲ್ಲಿ ಸ್ಪರ್ಧೆಗೆ ಚಾಲನೆ ನೀಡಿರು. ವಿಶಿಷ್ಟವಾಗಿ ಸಿದ್ಧಪಡಿಸಲಾಗಿದ್ದ ಅಂಕುಡೊಂಕಿನ ದಾರಿಯಲ್ಲಿ ಬೈಕ್ ಹಾಗೂ ಕಾರುಗಳ ಪ್ರತ್ಯೇಕ ಸ್ಪರ್ಧೆಗಳು ನಡೆದವು. ಪ್ರಾರಂಭದಲ್ಲಿ ಬೈಕ್ ಗಳ ಡರ್ಟ್ ಟ್ರ್ಯಾಕ್ ನಡೆಸಲಾಯಿತು. ಮೂಡಿಗೆರೆ ಲೋಕಲ್ ಕ್ಲಾಸ್, ಚಿಕ್ಕಮಗಳೂರು ಲೋಕಲ್ ಕ್ಲಾಸ್, 4 ಸ್ಟ್ರೋಕ್ ಕ್ಲಾಸ್, ಎಕ್ಸ್‌ಪೋರ್ಟ್ ಕ್ಲಾಸ್, 2 ಹಾಗೂ 4 ಸ್ಟ್ರೋಕ್, ಇಂಡಿಯನ್ ಓಪನ್ ಕ್ಲಾಸ್ ಬೈಕ್ ಡರ್ಟ್ ಟ್ರ್ಯಾಕ್ ನಡೆದವು.

ಬಳಿಕ 800 ಸಿಸಿ ಸೇರಿದಂತೆ 1100 ಸಿಸಿ, 1400 ಸಿಸಿ, 1600 ಸಿಸಿ ಸಂಬಂಧಿತ ನಾಲ್ಕು ಚಕ್ರ ವಾಹಗಳ ಡರ್ಟ್ ಟ್ರ್ಯಾಕ್ ನಡೆಸಲಾಯಿತು. ಸಂಜೆ ವೇಳೆಗೆ ತುಂತುರು ಮಳೆ ಸುರಿಯಿತು. ಮಳೆಯ ನಡುವೆಯೇ ಸ್ಪರ್ಧಾಳುಗಳು ಮುನ್ನುಗ್ಗಿ ಯಶಸ್ಸಿನತ್ತ ಸಾಗಿದರು. ಟೀಮ್ ಮೆಜೆಸ್ಟಿಕ್ ನ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.