ಮೊಳಕಾಲ್ಮುರು(ಚಿತ್ರದುರ್ಗ ಜಿಲ್ಲೆ):ಎರಡು ವರ್ಷದಿಂದ ಹುಣಸೆಹಣ್ಣಿನ ದರ ತೀವ್ರ ಕುಸಿತ ಕಂಡಿದ್ದು ಬೆಳೆಗಾರರು, ಖೇಣಿದಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕೋವಿಡ್ಗೂ ಮುನ್ನ ಹುಣಸೆಹಣ್ಣಿನ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 150 ಆಸುಪಾಸಿನಲ್ಲಿತ್ತು. ಈಗ ಕೆ.ಜಿಗೆ ₹ 42 ಇಳಿದಿದೆ. ಚಳ್ಳಕೆರೆ ಮಾರುಕಟ್ಟೆಯಲ್ಲಿ ಭಾನುವಾರ ಕ್ವಿಂಟಲ್ಗೆ ₹ 4,200 ರಿಂದ ₹ 4,600ಕ್ಕೆಹುಣಸೆ ಮಾರಾಟವಾಗಿದೆ ಎಂದು ಎಪಿಎಂಸಿ ನಿರ್ದೇಶಕ ಈಶ್ವರಪ್ಪ ಮಾಹಿತಿ ನೀಡಿದರು.

ಲಾಕ್ಡೌನ್ನಲ್ಲಿ ಕುಸಿತವಾದ ದರ ಮತ್ತೆ ಏರಿಕೆ ಕಂಡಿಲ್ಲ.ಹೆಚ್ಚು ಇಳುವರಿ ಮತ್ತುಬೇಡಿಕೆಗಿಂತಲೂ ಹೆಚ್ಚು ಆವಕ ದರ ಕುಸಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಚಳ್ಳಕೆರೆಯ ತೋಂಟದಾರ್ಯ ಟ್ರೇಡರ್ಸ್ನ ಎಸ್. ಚೈತನ್ಯ.

ಹೈದರಾಬಾದ್, ಮದನಪಲ್ಲಿ,ಹಿಂದೂಪುರ, ಪುದುಚೇರಿ, ಪುಂಗನೂರು, ಒಡಿಶಾದ ಜಗದಾಲ್ಪುರದಲ್ಲಿ ಹುಣಸೆ ಶೇಖರಣೆ ಘಟಕಗಳಿದ್ದು, ಕಳೆದ ವರ್ಷ 6,500 ಲೋಡ್ ಹುಣಸೆ ದಾಸ್ತಾನು ಮಾಡಲಾಗಿತ್ತು. ಇದಕ್ಕೆ ಈ ವರ್ಷ ಮತ್ತೆ 38,000 ಲೋಡ್ ಸೇರ್ಪಡೆಯಾಗಿದೆ.

ರಾಜ್ಯದಲ್ಲಿ ಚಳ್ಳಕೆರೆ ಹುಣಸೆಹಣ್ಣಿನ ಪ್ರಮುಖ ಮಾರುಕಟ್ಟೆ. ಇಲ್ಲಿಗೆ ಸೀಮಾಂಧ್ರದ ಹುಣಸೆ ಮಾರಾಟಕ್ಕೆ ಬರುತ್ತದೆ.ಮೊಳಕಾಲ್ಮೂರಿನಲ್ಲೂ ಹುಣಸೆಯ ದೊಡ್ಡ ಮಾರುಕಟ್ಟೆ ಇದೆ.ಜನವರಿಯಿಂದ ಆರಂಭವಾಗುವ ಮಾರಾಟ ಜೂನ್ವರೆಗೆ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.