ಬಜಪೆ: ನಕಲಿ ದಾಖಲಾತಿ ತೋರಿಸಿ ಪಾಸ್ಪೋರ್ಟ್ ಪಡೆದು ದುಬೈಗೆ ಪ್ರಯಾಣಿಸಲು ಯತ್ನಿಸುತ್ತಿದ್ದ ಬಾಂಗ್ಲಾ ದೇಶದ ಪ್ರಜೆ ವಿರುದ್ಧ ಬಜಪೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ಮಾಣಿಕ್ ಚೌಕ್ನ ಮಹಮ್ಮದ್ ಮಾಣಿಕ್ ಹುಸೈನ್ ನಕಲಿ ದಾಖಲೆ ನೀಡಿ ಪಾಸ್ಪೋರ್ಟ್ ಮಾಡಿಸಿದ್ದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಿಯು ಅ.10ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಪ್ರಯಾಣ ಬೆಳೆಸುವವನಿದ್ದ. ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿ ಕೆ.ಸಿ.ಸರಸ್ವತಿ ಆತನ ಪಾಸ್ಪೋರ್ಟ್ ಅನ್ನು ಪರಿಶೀಲಿಸಿದ್ದರು. ಅನುಮಾನಗೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ತಾನು ಬಾಂಗ್ಲಾದೇಶದ ಪ್ರಜೆ ಎಂಬುದನ್ನು ಆತ ಆಗ ಒಪ್ಪಿಕೊಂಡಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಆರೋಪಿಯು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂತರರಾಷ್ಟ್ರೀಯ ಗಡೀರೇಖೆಯನ್ನು ಹಂಚಿಕೊಂಡಿರುವ ಪಶ್ಚಿಮ ಬಂಗಾಳ ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯ ಲಾಲ್ಗೋಲ್ ಮೂಲಕ ಭಾರತಕ್ಕೆ ಬಂದಿದ್ದ. ನಂತರ ಉಡುಪಿಗೆ ಬಂದಿದ್ದ. ನಕಲಿ ದಾಖಲೆ ಒದಗಿಸಿ ಭಾರತೀಯ ನಿವಾಸಿ ಪರ್ವೆಜ್ ಎಂಬಾತನ ನೆರವಿನಿಂದ ಪಾಸ್ಪೊರ್ಟ್ ಮಾಡಿಸಿ ದುಬೈಗೆ ಪ್ರಯಾಣಿಸಲು ಯತ್ನಿಸಿದ್ದ. ಈ ಅಂಶವನ್ನು ಆರೋಪಿಯೇ ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ತಮ್ಮನ್ನು ಹಾಗೂ ಕೇಂದ್ರ ಸರ್ಕಾರವನ್ನು ವಂಚಿಸಿದ ಆರೋಪಿ ಹಾಗೂ ಆತ ಪಾಸ್ಪೋರ್ಟ್ ಮಾಡಿಸಲು ಸಹಕರಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.