‘ಕಾಳುಮೆಣಸು ಬೆಳೆಯಲು ಆಸಕ್ತಿ’
‘ಐದು ವರ್ಷಗಳಲ್ಲಿ ಸುಮಾರು 13 ಸಾವಿರ ಹೆಕ್ಟೇರ್‌ನಷ್ಟು ಕಾಳುಮೆಣಸು ಪ್ರದೇಶ ವಿಸ್ತರಣೆಯಾಗಿರುವುದು ದಾಖಲಾಗಿದೆ. ಇದರಲ್ಲಿ ಈ ಹಿಂದೆ ಬೆಳೆಯುವ ಪ್ರದೇಶವೂ ಕೆಲ ಪ್ರಮಾಣದಲ್ಲಿ ಸೇರಿಕೊಂಡಿದೆ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಮಾಡುತ್ತಿರುವ ಕಾರಣ ಬೆಳೆಯ ವಿವರ ದಾಖಲಾಗುತ್ತಿದೆ. ಜೊತೆ ಇಲಾಖೆಯ ಹಲವಾರು ಯೋಜನೆಗಳು ಕಾಳುಮೆಣಸು ಬೆಳೆಯಲು ಸಹಕಾರಿಯಾಗಿವೆ. ಉತ್ತಮ ದರ ಇರುವ ಕಾರಣ ರೈತರೂ ಬೆಳೆಯಲು ಉತ್ಸಾಹ ತೋರುತ್ತಿದ್ದಾರೆ’ ಎಂದು ತೋಟಗಾರಿಕಾ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಪ್ರವೀಣ್ ಮಾಹಿತಿ ನೀಡಿದರು. ಅಡಿಕೆ ಹಳದಿ ರೋಗ ಕಂಡು ಬಂದ ಪ್ರದೇಶಗಳಲ್ಲಿ ಪರ್ಯಾಯ ಬೆಳೆಯಾಗಿ ಕಾಳುಮೆಣಸು ಬೆಳೆಯಲು ನೆರವು ನೀಡಲಾಗುತ್ತಿದೆ. ಪ್ರದೇಶ ವಿಸ್ತರಣೆಗೆ ಕಾಳುಮೆಣಸು ತೋಟ ಪುನಶ್ಚೇತನಕ್ಕೆ ಇಲಾಖೆ ನೆರವು ನೀಡುತ್ತದೆ ಎಂದು ಅವರು ‘ಪ್ರಜಾವಾಣಿ‘ಗೆ ತಿಳಿಸಿದರು.