ಕಾಸರಗೋಡು: ಕಂದಕದಲ್ಲಿ (ಕೆರೆ) ಮುಳುಗಿ ಬಾಲಕ ಮೃತಪಟ್ಟಿದ್ದನ್ನು ನೋಡಿದ ನೆರೆಮನೆಯ ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಬಂಗಳಂ ಹಾಲಿನ ಸೊಸೈಟಿ ಬಳಿಯ ಜಮಾ ಅತ್ ಕ್ವಾರ್ಟರ್ಸ್ನಲ್ಲಿ ವಾಸವಾಗಿರುವ ಸೆಬಾಸ್ಟಿನ್ ಎಂಬುವರ ಪುತ್ರ ಆಲ್ಬಿನ್ ಸೆಬಾಸ್ಟಿನ್ (16) ಮನೆ ಪಕ್ಕದಲ್ಲೇ ಇರುವ ಕಂದಕ್ಕೆ ಈಜಾಡಲು ಇಳಿದಿದ್ದರು. ಈ ವೇಳೆ ಅವರ ತಾಯಿ ಸೇರಿದಂತೆ ಹಲವರು ಪಕ್ಕದಲ್ಲೇ ಇದ್ದರು. ನೀರಿಗಿಳಿದ ಕೆಲ ಹೊತ್ತಿನಲ್ಲೇ ಆಯತಪ್ಪಿದ ಆಲ್ಬಿನ್ ಮುಳುಗಿ ಕಾಣೆಯಾಗಿದ್ದರು. ಅಗ್ನಿಶಾಮಕ ಮತ್ತು ಸ್ಥಳೀಯರ ಸಹಕಾರದಿಂದ ಶವ ಮೇಲೆತ್ತಲಾಯಿತು. ಅಲ್ಲೇ ಇದ್ದ ನೆರೆಮನೆಯ ವಿಲಾಸಿನಿ (65) ಅವರು ಆಲ್ಬಿನ್ ಅವರ ಶವ ನೋಡಿದ ಕೂಡಲೇ ಕುಸಿದು ಬಿದ್ದರು.

ತಕ್ಷಣ ಅವರನ್ನು ನೀಲೇಶ್ವರ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ನೀಲೇಶ್ವರ ಪೊಲೀಸರು ಮಹಜರು ನಡೆಸಿದರು.

ಮೂಲತಃ ಆಲಪ್ಪುಳ ನಿವಾಸಿಯಾಗಿರುವ ಸೆಬಾಸ್ಟಿನ್ ಹತ್ತು ವರ್ಷಗಳ ಹಿಂದೆ ಬಂಗಳಂನಲ್ಲಿ ನೆಲೆಸಿದ್ದಾರೆ. ಅವರು ಏರಿಕುಳಂನ ತೈಲ ಕಾರ್ಖಾನೆಯೊಂದರ ಸಿಬ್ಬಂದಿ. ಅವರ ಏಕೈಕ ಪುತ್ರ ಆಲ್ಬಿನ್ ಉಪ್ಪಲಿಕೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಯಾಗಿದ್ದ. ವಿಲಾಸಿನಿ ಅವರಿಗೆ ಇಬ್ಬರು ಪುತ್ರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.