ಮಂಗಳೂರು: ‘ಹಿಂದೆಲ್ಲ ಆನಂದಪ್ರಾಪ್ತಿಗಾಗಿ ಸಾಧನೆ ಮಾಡಲಾಗುತ್ತಿತ್ತು. ಆದರೆ ಈಗ ಭೀಕರ ಆಪತ್ಕಾಲದ ಪರಿಸ್ಥಿತಿಯಲ್ಲಿ ಜೀವಂತವಾಗಿರಲು ಸಾಧನೆ ಮಾಡಿ ಎಂಬ ಜಾಗೃತಿ ಮೂಡಿಸಬೇಕಿದೆ’ ಎಂದು ಸನಾತನ ಸಂಸ್ಥೆಯ ಧರ್ಮಪ್ರಸಾರಕ ರಮಾನಂದ ಗೌಡ ಹೇಳಿದರು.

ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ’ದಲ್ಲಿ ಅವರು ಮಾರ್ಗದರ್ಶನ ಮಾಡಿದರು.

11 ಭಾಷೆಗಳಲ್ಲಿ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವವು ನಡೆಯಿತು. ವ್ಯಾಸಪೂಜೆ ಹಾಗೂ ಗುರುಪೂಜೆಯನ್ನು ಮಾಡಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಜಯಂತ ಅಠವಳೆ ನೀಡಿದ ಸಂದೇಶ ಓದು, ಅವರ ‘ಆಪತ್ಕಾಲಕ್ಕಾಗಿ ಮಾಡಬೇಕಾದ ಸಿದ್ಧತೆ’ಯ ಧ್ವನಿಚಿತ್ರಮುದ್ರಿಕೆಯ ಪ್ರದರ್ಶನ ನಡೆಯಿತು. ಸಂಸ್ಥೆಯ ಗ್ರಂಥಗಳು ಈಗ ‘ಈ-ಬುಕ್’ ರೂಪದಲ್ಲಿ ‘ಅಮೆಜಾನ್ ಕಿಂಡಲ್’ನಲ್ಲಿ ಲಭ್ಯವಿವೆ ಎಂದರು. ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಈ ಭಾಷೆಗಳ ಇತರ 8 ಗ್ರಂಥಗಳ ಲೋಕಾರ್ಪಣೆ ನಡೆಯಿತು. ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಸಮನ್ವಯಕ ಚಂದ್ರ ಮೊಗೇರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.