ಉಳ್ಳಾಲ: ನಾಟಿ ಕಾರ್ಯಕ್ಕೆ ಸ್ಥಳೀಯರು ಸಿಗುತ್ತಿಲ್ಲ ಎಂದು ಒಡಿಶಾ ಕಾರ್ಮಿಕರ ಮೊರೆಹೋದ ಕುತ್ತಾರು ಬಟ್ಟೆದಡಿಯ ಕೃಷಿಕರೊಬ್ಬರು, ಎರಡು ವರ್ಷಗಳಿಂದ ಲಾಭದಾಯಕವಾಗಿ ಭತ್ತ ಕೃಷಿ ಮಾಡುತ್ತಿದ್ದಾರೆ.

ಕುತ್ತಾರು ಬಟ್ಟೆದಡಿ ನಿವಾಸಿ ಕರುಣಾಕರ್ ಕಂಪ, ಕುಟುಂಬದ ಪಾಲು ದೊರೆತ ಒಂದು ಎಕರೆ ಗದ್ದೆಯಲ್ಲಿ ನಾಟಿ ಕಾರ್ಯ ನಡೆಸಲು ಜನರಿಲ್ಲದೆ ಎರಡು ವರ್ಷಗಳಿಂದ ಪಾಳು ಬಿಟ್ಟಿದ್ದರು. ನಾಟಿ ಕಾರ್ಯಕ್ಕೆ ಬರುತ್ತಿದ್ದ ಮಹಿಳೆಯರು ಸ್ಥಳೀಯ ಆಸ್ಪತ್ರೆಗಳಲ್ಲಿ ಕೆಲಸಕ್ಕೆ ಹೋಗತೊಡಗಿದ್ದರಿಂದ, ನಾಟಿ ಕಾರ್ಯಕ್ಕೆ ಕಾರ್ಮಿಕ ಮಹಿಳೆಯರ ಕೊರತೆ ಎದುರಾಗಿತ್ತು.

ಕರುಣಾಕರ್ ಅವರು ಕೆಲಸ ಮಾಡುತ್ತಿದ್ದ ಪೈವುಡ್ ಫ್ಯಾಕ್ಟರಿಯಲ್ಲಿ ಒಡಿಶಾ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಮಿಕರಿಲ್ಲದೆ ಭತ್ತದ ಗದ್ದೆ ಪಾಳು ಬಿದ್ದಿರುವುದನ್ನು ಕರುಣಾಕರ್ ತಮ್ಮ ಸ್ನೇಹಿತರೂ ಆದ ಸಹೋದ್ಯೋಗಿಗಳಿಗೆ ವಿವರಿಸಿದರು. ತಮ್ಮ ಸ್ನೇಹಿತನ ನೆರವಿಗೆ ಬಂದ ಈ ಕಾರ್ಮಿಕರು, ತಾವೇ ಭತ್ತ ನಾಟಿ ಮಾಡುತ್ತೇವೆ ಎಂದು ಮುಂದೆ ಬಂದರು. ಕಳೆದ ವರ್ಷವೂ ಭತ್ತ ನಾಟಿ ಮಾಡಿದ್ದರು. ಈ ಬಾರಿಯೂ ಬುಧವಾರ ಗಾಂಧಿ ಜಯಂತಿ ದಿನ ಫ್ಯಾಕ್ಟರಿಗೆ ರಜೆ ಇದ್ದಿದ್ದರಿಂದ ಗೆಳೆಯನ ಭತ್ತದ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದರು. ಬೆಳಿಗ್ಗೆ 8 ಗಂಟೆಗೆ ಕೆಲಸ ಆರಂಭಿಸಿದ ಕಾರ್ಮಿಕರು, ಮಧ್ಯಾಹ್ನದ ವೇಳೆಗಾಗಲೇ ಅರ್ಧ ಎಕರೆಯಷ್ಟು ಗದ್ದೆಯಲ್ಲಿ ನಾಟಿ ಕಾರ್ಯ ಪೂರ್ಣಗೊಳಿದ್ದರು.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಭತ್ತ ಬೆಳೆಯಲು ನೀಡುವ ಸಹಾಯಧನವನ್ನು ಕಾರ್ಮಿಕರ ವೇತನಕ್ಕೆ ವಿನಿಯೋಗಿಸಿ ಕರುಣಾಕರ್ ಭತ್ ಬೆಳೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಒಡಿಶಾದ ಕೆಂದ್ರಪಾಡ ಜಿಲ್ಲೆಯ ಭಾಗೀರಥಿ ದಾಸ್, ರಂಜನ್ ಮಲಿಕ್, ಬಾಬುರ್ ಮಲಿಕ್ , ಸ್ವರಾಜ್ ಮಲಿಕ್, ಪ್ರಯಾಗ್ ದಾಸ್ ಎಂಬುವರು ಕರುಣಾಕರ್ ಅವರಿಗೆ ಜತೆಯಾಗಿದ್ದು, ಸದ್ಯ ಒಂದು ಎಕರೆ ಜಮೀನಲ್ಲಿ ನಾಟಿ ಕಾರ್ಯದಲ್ಲಿ ಮುಗಿಸಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ ಫ್ಯಾಕ್ಟರಿಗೆ ರಜೆ ಇದ್ದಿದ್ದರಿಂದ ಬುಧವಾರ ಗೆಳೆಯ, ಸಹೋದ್ಯೋಗಿ ಕರುಣಾಕರ್ ಅವರ ಸಹಾಯಕ್ಕೆ ಬಂದೆವು. ಕಳೆದ ವರ್ಷದಂತೆ ಈ ಬಾರಿಯೂ ನಾಟಿಯಲ್ಲಿ ಭಾಗವಹಿಸಿದ್ದೇವೆ. ಗದ್ದೆ ಮಣ್ಣು ಉತ್ತಮವಾಗಿದ್ದರೆ 1 ಎಕರೆ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬಹುದು’ ಎಂದು ಒಡಿಶಾದ ಕಾರ್ಮಿಕ ಭಾಗೀರಥಿ ದಾಸ್ ಹೇಳಿದರು.

`ಸ್ನೇಹಕ್ಕಾಗಿ ಬಂದಿದ್ದಾರೆ'

ಹಿಂದೆ ನಾವು ಸಹೋದರರು ಸೇರಿಕೊಂಡು ಗದ್ದೆ ಕೆಲಸ ಮಾಡುತ್ತಿದ್ದೆವು. ಜಾಗ ಪಾಲಾದ ನಂತರ ಒಬ್ಬರೊಬ್ಬರೇ ದುಡಿಯಲು ಅಸಾಧ್ಯವಾಗಿದೆ. ಎರಡು ವರ್ಷ ಗದ್ದೆ ಖಾಲಿ ಬಿಟ್ಟಿದ್ದೆವು. ಕೋಟೆಕಾರು ಬ್ಯಾಂಕ್ ನೀಡಿದ ಪ್ರೋತ್ಸಾಹಧನದಿಂದ ಸಹೋದ್ಯೋಗಿ ಕಾರ್ಮಿಕರ ನೆರವಿನಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನಮ್ಮ ಸ್ನೇಹದಿಂದ ಪಾಳು ಬಿದ್ದ ಗದ್ದೆಯಲ್ಲಿ ಭತ್ತ ಕೃಷಿ ಸಾಧ್ಯವಾಗಿದೆ. ಭತ್ತದ ಸಸಿಗಳನ್ನು ಹತ್ತಿರದಲ್ಲಿ ನೆಡದೆ ದೂರದಲ್ಲಿ ನೆಡುವ ಒಡಿಶಾದ ನಾಟಿ ಪದ್ಧತಿ ಇಲ್ಲಿಯೂ ಲಾಭದಾಯಕ ಎನ್ನುವುದು ಸಾಬೀತಾಗಿದೆ ಎಂದು ಕರುಣಾಕರ್ ಕಂಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.