ಗೋಕರ್ಣ: ‘ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜತೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನ ನಡೆಸಲು, ಕನ್ಯೆಯರ ಪೋಷಕರನ್ನು ಒಳಗೊಂಡ ತಂಡವು ಕರಾವಳಿ ಕರ್ನಾಟಕಕ್ಕೆ ಬರುತ್ತಿದೆ, ಈ ತಂಡದ ಜೊತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯ ಆಪ್ತರಾಗಿರುವವರು ಇದ್ದಾರೆ. ಆದ್ದರಿಂದ ಮೋಸ ಹೋಗಲು ಅವಕಾಶವಿಲ್ಲ’ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೂ ಶ್ರೀರಾಮಚಂದ್ರಾಪುರ ಮಠಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಠವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಮಠದ ಜತೆ ನೇರ ಸಂಪರ್ಕ ಇರುವ ಯಾರೂ ಇಂಥ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿಲ್ಲ. ಈ ಗುಂಪಿನ ಜೊತೆ ವ್ಯವಹರಿಸುವವರು ಸ್ವಂತ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕೇ ವಿನಾ ಇದಕ್ಕೆ ಮಠವಾಗಲೀ, ಮಠಕ್ಕೆ ಸಂಬಂಧಿಸಿದ ಯಾವುದೇ ಸಂಘಟನೆ, ಸಂಘ ಸಂಸ್ಥೆಯಾಲೀ ಹೊಣೆ ಆಗಿರುವುದಿಲ್ಲ. ವ್ಯವಹಾರ ನಡೆಸುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.