ಮಂಗಳೂರು: ರೋಹನ್ ಕಾರ್ಪೊರೇಷನ್‌ನಿಂದ ಮಾ.5ರಂದು ‘ಸೋನು ನಿಗಮ್ ಲೈವ್ ಇನ್ ಕನ್ಸರ್ಟ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ರೋಹನ್ ಮೊಂತೆರೊ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪಕ್ಷಿಕೆರೆಯ 32 ಎಕರೆ ಪ್ರದೇಶದಲ್ಲಿ 372 ನಿವೇಶನಗಳಿರುವ ‘ರೋಹನ್ ಎಸ್ಟೇಟ್’ ವಸತಿ ಬಡಾವಣೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಈ ಬಡಾವಣೆ ಹಾಗೂ ಅಲ್ಲಿನ ಸೌಕರ್ಯಗಳನ್ನು ಮಂಗಳೂರು ಮತ್ತು ಆಸುಪಾಸಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಮಾ.5ರಂದು ಸಂಜೆ 5 ಗಂಟೆಗೆ ಎಂ.ಆರ್. ಪೂಂಜ ಐಟಿಐನ ಎದುರುಗಡೆ, ಕಂಬಳಬೆಟ್ಟು, ಪಕ್ಷಿಕೆರೆ (ಹಳೆಯಂಗಡಿ) ರೋಹನ್ ಎಸ್ಟೇಟ್ ಬಡಾವಣೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಗಾಯಕ ಸೋನು ನಿಗಮ್ ಕಾರ್ಯಕ್ರಮಕ್ಕೆ 5,000ಕ್ಕೂ ಹೆಚ್ಚು ಜನರನ್ನು ನಿರೀಕ್ಷಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಉಚಿತ ಪಾಸ್‌ಗಾಗಿ ಮಾ.3ರ ಒಳಗೆ ಪಕ್ಷಿಕೆರೆ ರೋಹನ್ ಎಸ್ಟೇಟ್‌ಗೆ ಭೇಟಿ ನೀಡಿ ಪಡೆಯಬಹುದು. 9845607725 /9845607724/ 9845607731 ಈ ಸಂಖ್ಯೆ ಸಂಪರ್ಕಿಸಿ, ಉಚಿತ ಪಾಸ್ ಡೌನ್‌ಲೋಡ್ ಮಾಡುವ ಲಿಂಕ್ ಪಡೆಯಬಹುದು. ಹೆಚ್ಚಿನ ವಿವರಕ್ಕೆ rohancorporation.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಹೇಳಿದರು. ಟೈಟಸ್ ನೊರೊನ್ಹಾ, ಅಲ್ಸ್ಟನ್ ಸಿಕ್ವೇರಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.