ದಾವಣಗೆರೆ: ಕೋವಿಡ್–19 ನಿಂದಾಗಿ ತೊಂದರೆಗೀಡಾದ ಕ್ಷೌರಿಕರಿಗೆ ನೀಡುವ ₹5 ಸಾವಿರ ಪರಿಹಾರ ಪಡೆಯಲು ಸರ್ಕಾರ ವಿಧಿಸಿರುವ ಪರವಾನಗಿ ಕಡ್ಡಾಯ ನೀತಿಯನ್ನು ಸರಳೀಕರಣಗೊಳಿಸುವಂತೆ ಸವಿತಾ ಸಮಾಜ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ನೋಂದಣಿಗೆ ಜೂನ್ 30 ಕಡೆಯ ದಿನವಾಗಿದ್ದು, ಅಧಿಕಾರಿಗಳು ಉದ್ಯೋಗ ದೃಢೀಕರಣ ಪತ್ರಕ್ಕೆ ಸಹಿ ಹಾಕುವ ಕಾರ್ಯ ನಡೆಯುತ್ತಿರುವುದರಿಂದ ಸೇವಾ ಸಿಂಧುವಿನಲ್ಲಿ ಅಪ್ಲೋಡ್ ಮಾಡಲು ಆಗಿಲ್ಲ. ಆದ್ದರಿಂದ ದಿನಾಂಕವನ್ನು ಮುಂದೂಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಿಪಿಎಲ್ ಫಲಾನುಭವಿಗಳಿಗೆ ಮಾತ್ರ ಹೇಳಿದ್ದು, ಕೆಲವರ ಹೆಸರನ್ನು ಕೈಬಿಡಲಾಗಿದೆ. ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಪರಿಶೀಲಿಸಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡುವ ಷರತ್ತನ್ನು ಸಡಿಲಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಕ್ಷೌರಿಕರಿಗೆ ಸರಿಯಾದ ಮನೆ ಇಲ್ಲ. ಕೆಲವರು ಫುಟ್ಪಾತ್ ಹಾಗೂ ಮುರುಕಲು ಚೇರ್ಗಳಲ್ಲಿ ಇಟ್ಟುಕೊಂಡು ವೃತ್ತಿನಿರತರಾಗಿದ್ದಾರೆ. ಕೆಲವರು ದವಸ ಧಾನ್ಯಗಳಿಗೆ ಮನೆ ಮನೆ ತಿರುಗಿ ಕೆಲಸ ಮಾಡುತ್ತಿದ್ದು, ಅವರಿಗೆ ಪರವಾನಗಿ ಇರುವುದಿಲ್ಲ. ಇದನ್ನು ಪರಿಶೀಲನೆ ಮಾಡಬೇಕು ಎಂದು ಸಂಘದ ಅಧ್ಯಕ್ಷ ರಂಗಸ್ವಾಮಿ ಮನವಿ ಮಾಡಿದ್ದಾರೆ.

ಕಾರ್ಯದರ್ಶಿ ಪರಶುರಾಂ, ಖಜಾಂಚಿ ಕರಿಬಸಪ್ಪ ಮನವಿ ಸಲ್ಲಿಸುವ ವೇಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.