ದಾವಣಗೆರೆ: ಮೆಟ್ರೊ ಪಿಲ್ಲರ್ನ ಕಬ್ಬಿಣದ ಚೌಕಟ್ಟು ಉರುಳಿ ಮೃತಪಟ್ಟಿರುವ ಜಿ.ಎಂ. ತೇಜಸ್ವಿನಿ (28) ಅವರ ದಾವಣಗೆರೆಯ ತವರು ಮನೆಯಲ್ಲಿ ಮಂಗಳವಾರ ದುಃಖದ ವಾತಾವರಣ ಮಡುಗಟ್ಟಿತ್ತು.

ಅವಘಡದ ಸುದ್ದಿ ತಿಳಿದು ತಂದೆ ಜಿ.ಮದನ್, ತಾಯಿ ರುಕ್ಷ್ಮಿಣಿ ಬಾಯಿ ಬೆಂಗಳೂರಿಗೆ ಧಾವಿಸಿದರು. ದೊಡ್ಡಪ್ಪಂದಿರಾದ ನಾರಾಯಣ ರಾವ್, ರಾಘವೇಂದ್ರ ರಾವ್ ಕುಟುಂಬದವರ ಕಣ್ಣಾಲಿ ತುಂಬಿದ್ದವು.

10 ದಿನದ ಹಿಂದೆಯಷ್ಟೇ ಇಲ್ಲಿನ ಬಸವೇಶ್ವರ ನಗರದ ತವರು ಮನೆಗೆ ತೇಜಸ್ವಿನಿ ಬಂದು ಹೋಗಿದ್ದರು.

‘ಪರಿಹಾರ ಯಾರಿಗೆ ಬೇಕು? ಅವರಿಂದ (ಬಿಎಂಆರ್ಸಿಎಲ್) ಜೀವ ಕೊಡಲು ಆಗುತ್ತದೆಯೇ? ಘಟನೆಗೆ ಕಾರಣರಾದವರನ್ನು ಬಂಧಿಸಬೇಕು’ ಎಂದು ತೇಜಸ್ವಿನಿ ಅವರ ಸಹೋದರಿ ಭಾಗ್ಯ ಒತ್ತಾಯಿಸಿದರು.

ದೂರು ಪಡೆಯಲು ವಿಳಂಬಕ್ಕೆ ಆಕ್ರೋಶ: ‘ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ ಲೋಹಿತ್ ಕುಮಾರ್, ಅವಘಡ ಸಂಬಂಧ ದೂರು ನೀಡಲು ಗೋವಿಂದಪುರ ಠಾಣೆಗೆ ಹೋಗಿದ್ದರು. ದೂರು ಪಡೆಯಲು ವಿಳಂಬ ಮಾಡಿದ್ದ ಪೊಲೀಸರು, ಹಲವು ಗಂಟೆಗಳ ಕಾಲ ಠಾಣೆಯಲ್ಲಿ ಕೂರಿಸಿದ್ದರು’ ಎಂದು ತೇಜಸ್ವಿನಿ ದೊಡ್ಡಪ್ಪ ನಾರಾಯಣರಾವ್ ದೂರಿದರು.

‘ಪತ್ನಿ, ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ಲೋಹಿತ್ ಅವರನ್ನು ಠಾಣೆಯಲ್ಲೇ ಕೂರಿಸಿಕೊಂಡು ಪೊಲೀಸರು ಮತ್ತಷ್ಟು ನೋವುಂಟು ಮಾಡಿದ್ದಾರೆ. ಈ ಕ್ರಮ ಸರಿಯಲ್ಲ. ಈ ಬಗ್ಗೆ ತನಿಖೆಯಾಗಬೇಕು’ ಎಂದೂ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.